ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಜೈಲು ಪಾಲಾಗಿದ್ದಾರೆ. ಜೈಲಿನಲ್ಲಿ ಇರುವಂತ ಅವರು ಮನೆ ಊಟಕ್ಕೆ ಅನುಮತಿ ನೀಡುವಂತೆ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂತಹ ಅರ್ಜಿಯನ್ನು ಇಂದು ವಾಪಾಸ್ ಪಡೆದಿದ್ದಾರೆ.
ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಕೇಸಲ್ಲಿ ಇದ್ದಾರೆ. ತಮ್ಮ ಪರ ವಕೀಲರ ಮೂಲಕ ಜೈಲು ಊಟ ಬೇಡ, ಮನೆಯೂಟಕ್ಕೆ ಅವಕಾಶ ಮಾಡಿಕೊಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದಂತ ಕೋರ್ಟ್ ಮನೆ ಊಟಕ್ಕೆ ಅನುಮತಿಸುವುದಕ್ಕೆ ನಿರಾಕರಿಸಿ, ಅರ್ಜಿ ವಜಾಗೊಳಿಸಿತ್ತು.
ಈ ಹಿನ್ನಲೆಯಲ್ಲಿ ಮತ್ತೆ ಮೇಲ್ಮನವಿಯನ್ನು ಕೋರ್ಟ್ ಗೆ ಸಲ್ಲಿಸಲಾಗಿತ್ತು. ಆದ್ರೇ ಇಂದು ತಾಂತ್ರಿಕ ಕಾರಣದಿಂದಾಗಿ ನಟ ದರ್ಶನ್ ಪರ ವಕೀಲ ಅರುಣ್ ಅವರು ಮನೆ ಊಟ ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ವಾಪಾಸ್ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
‘ಸಿಎಂ ಸಿದ್ಧರಾಮಯ್ಯ’ ಎಷ್ಟು ಸರಳ ಗೊತ್ತಾ.? ಈ ಸುದ್ದಿ ಓದಿ | CM Siddaramaiah