ಬೆಂಗಳೂರು: ಬಾಸ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಬಾಸ್ ಸಿನಿಮಾಗೆ ನಟ ದರ್ಶನ್ ಪರ ವಕೀಲರಿಂದ ನೋಟಿಸ್ ನೀಡಲಾಗಿದೆ. ಅದರಲ್ಲಿ ಬಾಸ್ ಸಿನಿಮಾಗೆ ಸೆನ್ಸಾರ್ ಮಾಡಬಾರದೆಂದು ವಕೀಲರು ಸೂಚಿಸಿದ್ದಾರೆ.
ಬಾಸ್ ಸಿನಿಮಾಗೆ ಸೆನ್ಸಾರ್ ಮಾಡದಂತೆ ಸೆನ್ಸಾರ್ ಮಂಡಳಿಗೆ ನಟ ದರ್ಶನ್ ಪರ ವಕೀಲರಿಂದ ನೋಟಿಸ್ ನೀಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಎನ್ನಲಾಗುತ್ತಿರುವ ಕಾರಣ, ಈ ನೋಟಿಸ್ ನೀಡಲಾಗಿದೆ. ಇತ್ತೀಚೆಗಷ್ಟೇ ಬಾಸ್ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು.
ಲಾಯರ್ ನೋಟಿಸ್ ಬಗ್ಗೆ ಬಾಸ್ ಚಿತ್ರದ ನಿರ್ದೇಶಕ ಲವ ಹಾಗೂ ನಟ ತನುಷ್ ಶಿವಣ್ಣ ಮಾತನಾಡಿ, ಸಿನಿಮಾವನ್ನ ಈಗಾಗಲೇ ಸೆನ್ಸಾರ್ ಮಂಡಳಿ ನೋಡಿದೆ. ಚಿತ್ರದಲ್ಲಿನ 12 ರಿಂದ 15 ಸೀನ್ ಕತ್ತರಿಗೆ ಸೂಚಿಸಿದೆ. ಯುಎ ಸರ್ಟಿಫಿಕೇಟ್ ನೀಡಲು ಸೈನ್ ಹಾಕಿಸಿಕೊಂಡಿದ್ದಾರೆ. ನೋಟಿಸ್ ಬಂದಿದ್ದು, ಮತ್ತೆ ಪರಿಶೀಲಿಸ್ತೀವಿ ಎಂದಿದ್ದಾರೆ ಅಂತ ತಿಳಿಸಿದ್ದಾರೆ.
ಲಾಯರ್ ನೋಟಿಸ್, ಬೆದರಿಕೆ ನನಗೆ ಹೊಸದೇನೂ ಅಲ್ಲ. ನಾವು ಸಹ ಕಾನೂನು ಹೋರಾಟ ಮಾಡ್ತಿವಿ ಎಂಬುದಾಗಿ ಬಾಸ್ ಚಿತ್ರ ತಂಡವು ತಿಳಿಸಿದೆ.
Health Tips: ಇವು ‘ದ್ರಾಕ್ಷಿ ಸೇವನೆ’ಯ ಅದ್ಭುತ ಆರೋಗ್ಯಕರ ಪ್ರಯೋಜನಗಳು
ಕಾಗೆಗಳು ಅಂತ್ಯಸಂಸ್ಕಾರ ಮಾಡುತ್ತವೆಯೇ? ಸತ್ತ ಕಾಗೆಯ ಸುತ್ತ ಗುಂಪುಗೂಡುವುದೇಕೆ? ಇಲ್ಲಿದೆ ಹಿಂದಿನ ವೈಜ್ಞಾನಿಕ ಸತ್ಯ








