ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವಂತ ನಟ ದರ್ಶನ್ ಅವರು, ತಮಗೆ ಜೈಲೂಟ ಬೇಡ, ಮನೆಯೂಟಕ್ಕೆ ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೇ ಕೋರ್ಟ್ ವಾದ- ಪ್ರತಿವಾದವನ್ನು ಆಲಿಸಿದ ನಂತ್ರ, ತೀರ್ಪನ್ನು ಜುಲೈ.25ಕ್ಕೆ ಕಾಯ್ದಿರಿಸಿದೆ. ಹೀಗಾಗಿ ನಟ ದರ್ಶನ್ ಗೆ ಜೈಲೂಟವೇ ಗತಿ ಎನ್ನುವಂತೆ ಆಗಿದೆ.
ಇಂದು ನಟ ದರ್ಶನ್ ಪರ ವಕೀಲರು ಜೈಲೂಟದಿಂದ ತಮ್ಮ ಕಕ್ಷಿದಾರರು ತೂಕ ಇಳಿಕೆಯಾಗಿದ್ದಾರೆ. ಅವರಿಗೆ ಮನೆಯೂಟಕ್ಕೆ ಅವಕಾಶ ನೀಡಬೇಕು. ಓದೋದಕ್ಕೆ ಪುಸ್ತಕ, ಹಾಸಿಗೆ ಅವಕಾಶ ನೀಡಬೇಕು ಅಂತ ನ್ಯಾಯಪೀಠವರನ್ನು ಕೋರಿದರು.
ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಈ ್ಪರಕರಣದ ಅರ್ಜಿಯ ವಿಚಾರಣೆ ನಡೆಯಿತು. ಪೊಲೀಸರ ಪರ ಜೈಲು ನಿಯಮಾವಳಿಗಳಲ್ಲಿ ಮನೆಯೂಟಕ್ಕೆ ಅವಕಾಶವಿಲ್ಲ. ಅವಕಾಶ ನೀಡಿದರೂ 15 ದಿನಗಳ ಕಾಲ ಮಾತ್ರವೇ ಅವಕಾಶ ನೀಡಲು ನಿಯಮಾವಳಿಯಿದೆ ಅಂತ ಮನವರಿಕೆ ಮಾಡಿದರು.
ಈ ವಾದ ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು, ನಟ ದರ್ಶನ್ ಅವರು ಜೈಲೂಟ ಬೇಡ, ಮನೆಯೂಟ ಬೇಕು ಎಂಬುದಾಗಿ ಸಲ್ಲಿಸಿದ್ದಂತ ಅರ್ಜಿಯ ತೀರ್ಪನ್ನು ಜುಲೈ.25ಕ್ಕೆ ಕಾಯ್ದಿರಿಸಿದೆ. ಈ ಮೂಲಕ ಅಲ್ಲಿಯವರೆಗೆ ನಟ ದರ್ಶನ್ ಗೆ ಜೈಲೂಟವೇ ಗತಿ ಎನ್ನುವಂತೆ ಆಗಿದೆ.
ನಾನು ಎನ್ನುವುದು ಅಹಂಕಾರ, ನಾವು ಎನ್ನುವುದು ಸಂಸ್ಕಾರ: ಡಿಕೆಶಿ ಕುಟುಕಿದ ಕೇಂದ್ರ ಸಚಿವ HDK
BREAKING: ‘ಅಸಹಜ ಲೈಂಗಿಕ ದೌರ್ಜನ್ಯ’ ಕೇಸ್: ‘ಸೂರಜ್ ರೇವಣ್ಣ’ಗೆ ಜಾಮೀನು ಮಂಜೂರು | Suraj Revanna