ಬೆಂಗಳೂರು: ಸೆಲೆಬ್ರೆಟಿಯಾಗಿದ್ದಂತ ನಟ ದರ್ಶನ್ ಅವರಿಗೆ ಗನ್ ಲೈಸೆನ್ಸ್ ನೀಡಲಾಗಿತ್ತು. ಆದರೇ ಜೈಲುಪಾಲಾಗಿ ಜಾಮೀನಿನ ಮೇಲೆ ಹೊರ ಬಂದ ನಂತ್ರ, ಅವರ ಗನ್ ಲೈಸೆನ್ಸ್ ರದ್ದುಗೊಳಿಸಲಾಗಿತ್ತು. ಅಲ್ಲದೇ ಹಿಂಪಡೆಯಲಾಗಿತ್ತು. ಇದೀಗ ಕಮೀಷನರ್ ಆದೇಶ ಪ್ರಶ್ನಿಸಿ ನಾಳೆ ಹೈಕೋರ್ಟ್ ಗೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ.
ನಟ ದರ್ಶನ್ ಅವರಿಗೆ ನೀಡಲಾಗಿದ್ದಂತ ಗನ್ ಲೈಸೆನ್ಸ್ ಅನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ರದ್ದುಗೊಳಿಸಿದ್ದರು. ಆ ಬಳಿಕ ನಟ ದರ್ಶನ್ ಗನ್ ಅನ್ನು ರಾಜ ರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಸರೆಂಡರ್ ಮಾಡಿದ್ದರು.
ಇದೀಗ ನಾಳೆ ನಟ ದರ್ಶನ್ ಪರ ವಕೀಲ ಸುನೀಲ್ ಎಂಬುವರು ಕಮೀಷನರ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಆ ಮೂಲಕ ಗನ್ ಲೈಸೆನ್ಸ್ ರದ್ದು ವಿಚಾರವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಿದ್ದಾರೆ.
BREAKING: ಖ್ಯಾತ ಮಲಯಾಳಂ ನಿರ್ದೇಶಕ ಶಫಿ ವಿಧಿವಶ | Director Shafi No More
ಸುಡಾನ್ ನಲ್ಲಿ ಆಸ್ಪತ್ರೆ ಮೇಲೆ ದಾಳಿ: 70 ಮಂದಿ ಸಾವು | Attack on Hospital