ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆ ಬಳಿಕ ರಾಜಾತಿಥ್ಯದ ಪೋಟೋಗಳು ವೈರಲ್ ಆಗುತ್ತಿದ್ದಂತೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇಂದು ಕೋರ್ಟ್ ಗೆ ಪೊಲೀಸರಿಂದ ಕೊಲೆ ಕೇಸ್ ಸಂಬಂಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಚಾರ್ಜ್ ಶೀಟ್ ಮಾಹಿತಿಯನ್ನು ಪತ್ನಿ ವಿಜಯಲಕ್ಷ್ಮಿಗೆ ಕರೆ ಮಾಡಿ ದಾಸ ಪಡೆದಿರುವುದಾಗಿ ತಿಳಿದು ಬಂದಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಶಿಫ್ಟ್ ಮಾಡಲಾಗಿತ್ತು. ಜೈಲಿನಲ್ಲಿ ಚಾರ್ಜ್ ಶೀಟ್ ಸೇರಿದಂತೆ ತನ್ನ ಪ್ರಕರಣದ ಯಾವುದೇ ಮಾಹಿತಿ ಸಿಗುತ್ತಿಲ್ಲ. ತನಗೆ ಟಿವಿ ನೋಡಲು ವ್ಯವಸ್ಥೆ ಮಾಡುವಂತೆಯೂ ನಟ ದರ್ಶನ್ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೇ ಆ ಬಗ್ಗೆ ಜೈಲು ಅಧಿಕಾರಿಗಳು ಯಾವ ಕ್ರಮ ವಹಿಸಲಿದ್ದಾರೆ ಎಂಬುದು ತಿಳಿದು ಬರಬೇಕಿದೆ.
ಈ ಮಧ್ಯೆ ಬಳ್ಳಾರಿ ಜೈಲಿನಲ್ಲಿರುವಂತ ನಟ ದರ್ಶನ್, ಇಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವಂತ ಚಾರ್ಜ್ ಶೀಟ್ ಬಗ್ಗೆ ಮಾಹಿತಿ ಪಡೆಯುವ ಸಂಬಂಧ ಜೈಲಿನಿಂದಲೇ ಪತ್ನಿ ವಿಜಯಲಕ್ಷ್ಮಿಗೆ ಕರೆ ಮಾಡಿ, ಮಾಹಿತಿ ಪಡೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಅಂದಹಾಗೇ ಕೋರ್ಟ್ ಗೆ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಪೊಲೀಸರು ಎಫ್ಎಸ್ ಎಲ್ ವರದಿ ಹಾಗೂ ಸಿಎಫ್ಎಸ್ ನ 8 ಸಾಕ್ಷಿಗಳು ಒಳಗೊಂಡಂತೆ 27 ಜನರ 164 ಹೇಳಿಕೆಗಳನ್ನು ಒಳಗೊಂಡಂತ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 161 ಅಡಿಯಲ್ಲಿ 70 ಜನರಿಗೆ ಪಡೆದಿದ್ದಂತ ಹೇಳಿಕೆಯನ್ನು ಕೂಡ ಪೊಲೀಸರು ಆ ಚಾರ್ಜ್ ಶೀಟ್ ನಲ್ಲಿ ಸಲ್ಲಿಸಿದ್ದಾರೆ.
BREAKING : ಕುಸ್ತಿಪಟು ವಿನೇಶ್ ಪೋಗಾಟ್, ಭಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ | Joining Congress