ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ನಟ ದರ್ಶನ್ ಪರ ವಕೀಲರ ವಾದಕ್ಕೆ ಪ್ರತಿವಾದ ಸಲ್ಲಿಸಿದಂತ ಎಸ್ ಪಿಪಿ ಪ್ರಸನ್ನ ಕುಮಾರ್ ಅವರ ವಾದವನ್ನು ಆಲಿಸಿದಂತ ನ್ಯಾಯಪೀಠವು, ನಾಳೆಗೆ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ಈ ಮೂಲಕ ನಟ ದರ್ಶನ್ ಗೆ ಇಂದು ಶಾಕ್ ಆಗಿದೆ. ಜೈಲೇ ಗತಿ ಎನ್ನುವಂತೆ ಆಗಿದೆ.
ಇಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ನೀಡುವಂತೆ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಲಾಯಿತು. ಎಸ್ ಪಿಪಿ ಪ್ರಸನ್ನ ಕುಮಾರ್ ಅವರು ಇಂದು ವಾದ ಮುಂದುವರೆಸುತ್ತಾ, ರಿಮ್ಯಾಂಡ್ ಅರ್ಜಿಯೊಂದಿಕೆ ಕೇಸ್ ಡೈರಿಯನ್ನೂ ಹಾಜರುಪಡಿಸಲಾಗಿದೆ. ಮ್ಯಾಜಿಸ್ಟ್ರೇಟ್ ಕೂಡ ಕೇಸ್ ಡೈರಿ ಪರಿಶೀಲಿಸಲಾಗಿದೆ. ಬಂಧನದ ಕಾರಣಗಳ್ನು ಹೇಳಿಲ್ಲವೆಂದ ಕೆಲ ಆರೋಪಿಗಳು ಹೇಳಿದ್ದಾರೆ. ಆದರೇ ಕೋರ್ಟ್ ಅವಗಾಹನೆಗೆ ತರಲಾಗಿದೆ ಎಂದರು.
ಕೇಸ್ ಡೈರಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಮ್ಯಾಡಿಸ್ಟ್ರೇಟ್ ಕೂಡ ಕೇಸ್ ಡೈರಿಯನ್ನು ಪರಿಶೀಲಿಸಿದ್ದಾರೆ. ಕೋರ್ಟ್ ಅವಹಾಗನೆಗೂ ಕೇಸ್ ಡೈರಿಯನ್ನು ಸಲ್ಲಿಸುತ್ತಿದ್ದೇನೆ. ಆರೋಪಿಗಳ ಪರ ವಕೀಲರಗಿ ಈ ಕೇಸ್ ಡೈರಿ ನೋಡುವ ಹಕ್ಕಿಲ್ಲ. ಮ್ಯಾಜಿಸ್ಟ್ರೇಟ್ ಕೇಸ್ ಡೈರಿ ಪರಿಶೀಲಿಸಲಾಗಿದೆ ಎಂದು ಬರೆದಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
40 ಲಕ್ಷ ಹಣ ರಿಕವರಿಯ ಬಗ್ಗೆಯೂ ದರ್ಶನ್ ಪರ ವಕೀಲರು ಪ್ರಸ್ತಾಪಿಸಿದ್ದರು. ಈ ಹಣವನ್ನು ಸಾಕ್ಷಿಗಳ ಹೇಳಿಕೆಯನ್ನು ತಿರುಚಲು ಎಂಬುದಾಗಿ ದರ್ಶನ್ ಹೇಳಿಕೆಯೂ ಇದೆ. ನಟ ದರ್ಶನ್ ಕೃತ್ಯದ ವೇಳೆ ಬಳಸಿದ ಶಬ್ದಗಳನ್ನು ಗಮನಿಸಬೇಕು. ನನ್ನ ಹೆಂಡತಿಯನ್ನು ಗೋವಾಗೇ ಕರೆದೊಯ್ತೀಯಾ ಎಂದೆಲ್ಲ ಪ್ರಶ್ನಿಸಿದ್ದಾರೆ. ಆರೋಗಿಳ ಕೃತ್ಯಗಳು ಅಂತರಾಳದ ಗೌಪ್ಯತೆಯನ್ನು ತೋರಿಸುತ್ತದೆ ಎಂದರು.
ಈ ಕೇಸಲ್ಲಿ ನೇರ, ಸಾಂದರ್ಭಿಕ ಸಾಕ್ಷಿಗಳೂ ಇದ್ದಾವೆ. ಶವ ಮಹಜರು ಮಾಡಲು ವಿಳಂಬವಾಯಿತೆಂದು ಆರೋಪಿಸಲಾಗಿದೆ. ನಿಯಮದ ಪ್ರಕಾರ ಮಹಜರು ವೇಳೆ ಸಂಬಂಧಿಕರ ಹಾಜರಿ ಅಗತ್ಯ. ಮುಖದ ಮೇಲೆ ನಾಯಿ ಕಚ್ಚಿರುವುದು ಬಿಟ್ಟರೇ ಉಳಿದದ್ದು ಮರಣ ಪೂರ್ವ ಗಾಯಗಳು ಎಂಬುದಾಗಿ ಪೋಸ್ಟ್ ಮಾರ್ಟನ್ ವರದಿಯಲ್ಲಿ ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಸ್ಥಳ ಮಹಜರಿನ ವಿಳಂಬದಿಂದ ತನಿಖೆಗೆ ಯಾವುದೇ ಬಾಧಕವೂ ಆಗಿಲ್ಲ ಎಂಬುದಾಗಿ ನಟ ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಎತ್ತಿದಂತ ಪ್ರತಿ ಪ್ರಶ್ನೆಗೂ ಎಸ್ ಪಿಪಿ ಪ್ರಸನ್ನ ಕುಮಾರ್ ಕೌಂಟರ್ ಕೊಟ್ಟರು.
ಜಾಮೀನು ನೀಡುವುದು ನಿಯಮ, ಜೈಲು ಅಗತ್ಯ ಬಿದ್ದರೇ ಮಾತ್ರ. ಲಭ್ಯ ದಾಖಲೆಗಳ ಆಧಾರದಲ್ಲಿ ಕೋರ್ಟ್ ಇದನ್ನು ಪರಿಗಣಿಸಬೇಕು. ಇದು ಜಾಮೀನು ನಿಯಮ ಎಂಬ ವಾಕ್ಯಕ್ಕೆ ವಿನಾಯ್ತಿ ಬೇಡುವ ಪ್ರಕರಣ ಎಂದು ಪೊಲೀಸರ ಪರವಾಗಿ ಎಸ್ ಪಿಪಿ ಪ್ರಸನ್ನ ಕುಮಾರ್ ವಾದಿಸಿದರು.
ಒಟ್ಟಾರೆಯಾಗಿ ಎಸ್ಐಟಿ ಪೊಲೀಸರ ಪರವಾಗಿ ಎಸ್.ಪಿಪಿ ಪ್ರಸನ್ನ ಕುಮಾರ್ ಅವರು ರೇಣುಕಾಸ್ವಾಮಿ ಕೊಲೆ ಕೇಸಲ್ಲಿನ ಎ.1 ಆರೋಪಿ ಪವಿತ್ರಾ ಗೌಡ, ಎ.2 ಆರೋಪಿ ದರ್ಶನ್, ಎ8 ರವಿಶಂಕರ್ ಚಾಲಕನಾದರೂ ಅಪಹಣದಲ್ಲಿ ಪಾತ್ರವಿದೆ. ಆತ ಬಟ್ಟೆಯಲ್ಲಿಯೂ ರೇಣುಕ್ಸಾವಮಿ ರಕ್ತದ ಕೆಲೆಗಳು ಪತ್ತೆಯಾಗಿವೆ. ಷಡ್ಯಂತ್ರ ಸಾಭೀತಿಗೆ ಒಂದೇ ಬಾರಿಗೆ ಎಲ್ಲ ಒಪ್ಪಂದವಾಗಬೇಕಿಲ್ಲ. ಎಲ್ಲಾ ಗೌಪ್ಯತೆಗಳೂ ಎಲ್ಲರಿಗೂ ತಿಳಿದಿರಬೇಕೆಂದಿಲ್ಲ. ಹೀಗಾಗಿ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ8 ರವಿಶಂಕರ್, ಎ11 ನಾಗರಾಜು. ಎ12 ಲಕ್ಷ್ಮಣ್ ಗೆ ಜಾಮೀನು ನೀಡಬಾರದು ವಾದಿಸಿದರೇ, ಎ.13 ದೀಪಕ್ ವಿರುದ್ಧ ಕೊಲೆ ಆರೋಪವಿಲ್ಲ. ಅವರ ವಿರುದ್ಧ ಸಾಕ್ಷ್ಯ ನಾಶದ ಆರೋಪ ಮಾತ್ರವೇ ಇದೆ. ಹೀಗಾಗಿ ಅವರಿಗೆ ಜಾಮೀನು ನೀಡಬಹುದು ಎಂಬುದಾಗಿ ಎಂದು ವಾದಿಸಿದರು. ಈ ಮೂಲತ ತಮ್ಮ ವಾದವನ್ನು ಅಂತ್ಯಗೊಳಿಸಿದರು.
8ನೇ ಆರೋಪಿ ರವಿಶಂಕರ್ ಪರವಾಗಿ ವಕೀಲರು ವಾದ ಮಂಡಿಸಿ ಮುಕ್ತಾಯಗೊಳಿಸಿದ ಬಳಿಕ, ನಾಳೆ 2ನೇ ಆರೋಪಿ ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ ನಾಗೇಶ್ ಮತ್ತೆ ತಮ್ಮ ವಾದವನ್ನು ಮಂಡಿಸುವುದಾಗಿ ತಿಳಿಸಿದರು. ಅಕ್ಟೋಬರ್.14ರಂದು ಎ.8, ಎ11, ಎ12, ಎ13 ಜಾಮೀನು ಅರ್ಜಿ ಬಗ್ಗೆ ಆದೇಶಿಸುವುದಾಗಿ ಕೋರ್ಟ್ ತಿಳಿಸಿ, ನಾಳೆಗೆ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದೂಡಿಕೆ ಮಾಡಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
GOOD NEWS: BBMP ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು: ಅ.16ರಂದು ಕಾವೇರಿ 5ನೇ ಹಂತಕ್ಕೆ ಸಿಎಂ ಚಾಲನೆ
Good News: ದಸರಾ ಹಬ್ಬದ ಪ್ರಯುಕ್ತ ಅರಸೀಕೆರೆ-ಮೈಸೂರು ನಡುವೆ ಡೆಮು ವಿಶೇಷ ರೈಲು ಸಂಚಾರ
ಉಡುಪಿ:ಎಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು