ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಅನಾರೋಗ್ಯದ ಕಾರಣ ಜಾಮೀನು ಪಡೆದಿರುವಂತ ನಟ ದರ್ಶನ್ ಅವರಿಗೆ, ಈಗ ಸರ್ಜರಿ ಮಾಡೋದಕ್ಕೆ ದಿನಾಂಕ ನಿಗದಿ ಪಡಿಸಲಾಗಿದೆ. ನಟ ದರ್ಶನ್ ಅವರಿಗೆ ಡಿಸೆಂಬರ್.11ರಂದು ವೈದ್ಯರು ಸರ್ಜರಿ ಮಾಡಲಿದ್ದಾರೆ ಎಂಬುದಾಗಿ ಅವರ ಪರ ವಕೀಲರು ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಇಂದು ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಲ್ಲಿ ನಡೆಸಲಾಯಿತು. ಹಿರಿಯ ವಕೀಲ ಸಿವಿ ನಾಗೇಶ್ ಅವರು ದರ್ಶನ್ ಪರ ವಾದ ಮಂಡಿಸಿದರು. ನಟ ದರ್ಶನ್ ಅವರಿಗೆ ಡಿಸೆಂಬರ್.11ರಂದು ಸರ್ಜರಿ ಮಾಡಲಾಗುತ್ತದೆ ಎಂಬುದೈಗಿ ಹೈಕೋರ್ಟ್ ಗೆ ಮಾಹಿತಿ ನೀಡಿದರು.