ಬೆಂಗಳೂರು: ಹೈಕೋರ್ಟ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ಸಿಕ್ಕ ನಂತ್ರ, ಜಾಮೀನು ಅರ್ಜಿಗೆ ಸಹಿ ಮಾಡುವುದು ಸೇರಿದಂತೆ ವಿವಿಧ ಕೆಲಸಗಳ ನಿಮಿತ್ತ ಬಿಜಿಎಸ್ ಆಸ್ಪತ್ರೆಯಿಂದ ವೈದ್ಯರ ಅನುಮತಿ ಪಡೆದು ನಟ ದರ್ಶನ್ ಹೊರ ಬಂದಿದ್ದರು. ಇದೀಗ ಜಾಮೀನಿಗೆ ಸಹಿ ಮಾಡಿದ ಬಳಿಕ, ಬೆಂಗಳೂರಿನ ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ವಾಪಾಸ್ ಆಗಿದ್ದಾರೆ.
ನಟ ದರ್ಶನ್ ಅವರಿಗೆ ಹೈಕೋರ್ಟ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ದೊರೆತಿತ್ತು. ಮಧ್ಯಂತರ ಜಾಮೀನಿನ ಬಳಿಕ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದಂತ ಅವರು, ಇಂದು ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಅಲ್ಲಿ ಜಾಮೀನು ಅರ್ಜಿಗೆ ಸಹಿ ಮಾಡಿದ್ದರು. ಈ ಬಳಿಕ ಬಿಜಿಎಸ್ ಆಸ್ಪತ್ರೆಗೆ ನಟ ದರ್ಶನ್ ವಾಪಾಸ್ ಆಗಿದ್ದಾರೆ.
BIG NEWS: ಬೆಂಗಳೂರಲ್ಲಿ ಪತ್ನಿಯ ಕಾಟಕ್ಕೆ ಬೇಸತ್ತು ಮತ್ತೋರ್ವ ವ್ಯಕ್ತಿ ಆತ್ಮಹತ್ಯೆ
ALERT : ಸಾರ್ವಜನಿಕರೇ ಎಚ್ಚರ : ಮೊಬೈಲ್ ನಲ್ಲಿ ಈ `ಗೇಮ್’ ಆಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾಗೋದು ಗ್ಯಾರಂಟಿ.!