ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲುಪಾಲಾಗಿರುವ ನಟ ದರ್ಶನ್ ಕೋರ್ಟ್ ನಲ್ಲಿ ವಿಷ ಕೊಡಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ಬಿಸಿಲು ನೋಡಿ 1 ತಿಂಗಳಾಗಿದೆ. ಒಂದು ಮನವಿ ಇದೆ. ನನಗೆ ಸ್ವಲ್ಪ ವಿಷ ಕೊಡಿ ಎಂದು ಕೋರ್ಟ್ ನಲ್ಲಿ ನಟ ದರ್ಶನ್ ಹೇಳಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಿತು. ನಟ ದರ್ಶನ್ ದಿಂಬು, ಹಾಸಿಗೆ ನೀಡುವಂತೆ ಕೋರ್ಟ್’ಗೆ ಮನವಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಯುವ ವೇಳೆ ನಟ ದರ್ಶನ್ ಜಡ್ಜ್’ಗೆ ನನಗೆ ದಯವಿಟ್ಟು ವಿಷ ನೀಡಿ ಎಂದು ಮನವಿ ಮಾಡಿದ್ದಾರೆ
ನಟ ದರ್ಶನ್ ಮನವಿಗೆ ನ್ಯಾಯಾಧೀಶರು ತಿಳಿಹೇಳಿದ್ದು, ಹಾಗೆಲ್ಲಾ ಮಾತನಾಡಬಾರದು, ನೀವು ಮನವಿ ಮಾಡಿರುವ ಬಗ್ಗೆ ಇಂದು ಮಧ್ಯಾಹ್ನ ಆದೇಶ ಬರಲಿದೆ ಎಂದು ಹೇಳಿದ್ದಾರೆ.