ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಬಳ್ಳಾರಿ ಜೈಲು ಸೇರಿರುವಂತ ನಟ ದರ್ಶನ್, ಮತ್ತೊಂದು ಬೇಡಿಕೆಯನ್ನು ಜೈಲು ಅಧಿಕಾರಿಗಳಿಗೆ ಇಟ್ಟಿದ್ದಾರೆ. ಆದರೇ ಜೈಲು ಅಧಿಕಾರಿಗಳು ಮಾತ್ರ ಅವರ ಬೇಡಿಕೆ ಈಡೇರಿಸಲು ನಿರಾಕರಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿ ಇರುವಂತ ನಟ ದರ್ಶನ್ ಗೆ ಅವರ ಪತ್ನಿ ವಿಜಯಲಕ್ಷ್ಮಿ ಅವರು ವಿಟಮಿನ್ ಮಾತ್ರೆಗಳನ್ನು ನೀಡುವಂತೆ ಜೈಲು ಅಧಿಕಾರಿಗಳಿಗೆ ನೀಡಿದ್ದರು. ಆದರೇ ಅದನ್ನು ನಟ ದರ್ಶನ್ ಅವರಿಗೆ ಜೈಲು ಅಧಿಕಾರಿಗಳು ನೀಡಿರಲಿಲ್ಲ. ಪತ್ನಿ ತಂದುಕೊಟ್ಟಿರುವಂತ ವಿಟಮಿನ್ ಮಾತ್ರೆಗಳನ್ನು ನೀಡುವಂತೆ ನಟ ದರ್ಶನ್ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ನಟ ದರ್ಶನ್ ಮನವಿಯನ್ನು ಪುರಸ್ಕರಿಸದೇ ಜೈಲು ಅಧಿಕಾರಿಗಳು ಮಾತ್ರ ಬಿಲ್ ಖುಲ್ ನೋ ಎಂದಿದ್ದಾರೆ. ಕಾರಣ, ಆ ಮಾತ್ರಗಳನ್ನು ಕೊಲೆ ಆರೋಪಿ ದರ್ಶನ್ ಗೆ ನೀಡಬೇಕೇ ಬೇಡವೇ ಎನ್ನುವ ಬಗ್ಗೆ ಜೈಲಿನ ವೈದ್ಯರ ಸಲಹೆಯ ನಂತ್ರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಂದಹಾಗೇ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ, ಡ್ರೈಪ್ರೂಟ್ಸ್ ಸೇರಿದಂತೆ ನಾನಾ ತಿಂಡಿಗಳನ್ನು ನಟ ದರ್ಶನ್ ಗೆ ನೀಡಿದ್ದರು. ಇದರ ಜೊತೆಗೆ ದರ್ಶನ್ ಬಾಡಿ ಮೆಂಟೇನ್ ಗಾಗಿ ವಿಟಮಿನ್ ಮಾತ್ರೆಗಳನ್ನು ಸಹ ಕೊಟ್ಟು ಹೋಗಿದ್ದರು. ಆದರೇ ವಿಟಮಿನ್ ಮಾತ್ರೆಗಳನ್ನು ನೀಡಲು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಇಂದು ‘ಈದ್ ಮಿಲಾದ್’ ಹಬ್ಬ: ಬೆಂಗಳೂರಲ್ಲಿ ‘ಪೊಲೀಸ್ ಇಲಾಖೆ’ಯ ಈ ಮಾರ್ಗಸೂಚಿ ಕ್ರಮ ಪಾಲನೆ ಕಡ್ಡಾಯ