ಬೆಂಗಳೂರು: ಯಾರೂ ನಟ ದರ್ಶನ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅವರು ಜೈಲಿನಲ್ಲಿಯೂ ಮಂಕಾಗಿಲ್ಲ. ಈ ಮೊದಲು ಇದ್ದಂತ ಜೋಶ್ ನಲ್ಲಿಯೇ ನಟ ದರ್ಶನ್ ಇದ್ದಾರೆ ಅಂತ ನಟ ಧನ್ವೀರ್ ತಿಳಿಸಿದ್ದಾರೆ.
ಇಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಮಾತನಾಡುತ್ತಿಲ್ಲ. ಪೊಲೀಸರು, ಕಾನೂನು ತನ್ನ ಕೆಲಸ ಮಾಡುತ್ತಿದೆ ಎನ್ನುವಂತ ನಿಲುವನ್ನು ಹೊಂದಿದ್ದಾರೆ ಎಂದರು.
ನಾನು ಮಾತನಾಡುವುದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ ಅಂತ ಹೇಳಿದ್ದಾರೆ. ನಟ ದರ್ಶನ್ ತಪ್ಪು ಮಾಡಿದ್ದರೇ ಶಿಕ್ಷೆಯಾಗಲೀ, ತಲೆ ಕೆಡಿಸಿಕೊಳ್ಳಲ್ಲ ಎಂದು ನಟ ಧನ್ವೀರ್ ಹೇಳಿದರು.
ಸಿನಿಮಾ ಮತ್ತಿತರ ವಿಚಾರಗಳ ಬಗ್ಗೆ ದರ್ಶನ್ ಜೊತೆಗೆ ಚರ್ಚೆಯಾಗಿಲ್ಲ. ಆದರೇ ಕೆಲವೊಂದು ವಿಚಾರ ಇರುತ್ತೆ ಹೇಳಲು ಆಗುವುದಿಲ್ಲ. ಅಭಿಮಾನಿಗಳ ಬಗ್ಗೆ ನಟ ದರ್ಶನ್ ಗೆ ಸ್ವಲ್ಪವೂ ಕಾಳಜಿ ಕಡಿಮೆಯಾಗಿಲ್ಲ. ಯಾರು ಕುಗ್ಗುವಂತ ಪ್ರಶ್ನೇ ಇಲ್ಲ. ಜೈಲಿನಲ್ಲಿ ನಟ ದರ್ಶನ್ ಅದೇ ಜೋಶ್ ನಲ್ಲಿ ಇದ್ದಾರೆ ಎಂಬುದಾಗಿ ತಿಳಿಸಿದರು.
BREAKING : ವಾಲ್ಮೀಕಿ ಹಗರಣ : ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ಇಡಿ ವಶಕ್ಕೆ