ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು, ಖ್ಯಾತ ನಟಿಯೊಬ್ಬರಿಗೆ ಮಾಂಸ ತಿನ್ನಿಸಿ ಗಹಗಹಿಸಿ ನಕ್ಕಿದ್ದ ಎಂದು ಪ್ರಶಾಂತ್ ಸಂಬರಗಿ ಗಂಭೀರ ಆರೋಪ ಮಾಡಿದ್ದಾರೆ.
ಹಿಂಸೆ ಮತ್ತು ಕೊಲೆ ಮಾಡುವ ಮುನ್ನ ಈ ಅಮಾಯಕ ರೇಣುಕಾ ಸ್ವಾಮಿ ತಾನು ಲಿಂಗಾಯತ ಮತ್ತು ಸಸ್ಯಾಹಾರಿ ಎಂದು ಗೊಗರಿದರು ಕೇಳದೆ ಬಲವಂತವಾಗಿ ಚಿಕನ್ ಪೀಸ್ ಬಾಯಿಗೆ ತುರಿಕಿದನು ಈ ರೌಡಿ ಬಾಸ್.
ಅದೇ ರೀತಿ 3 ವರ್ಷಗಳ ಹಿಂದೆ ಒಬ್ಬಳು ಖ್ಯಾತ ಕನ್ನಡ ಚಲನಚಿತ್ರ ನಟಿ, ಇವನೊಡನೆ ಚಿತ್ರೀಕರಣ ವೇಳೆಯಲ್ಲಿ ತಾನು ಸಸ್ಯಾಹಾರಿ ಮತ್ತು ಸಾತ್ವಿಕ ಊಟ ಬೇಕು ಎಂದು ಕೇಳಿದಾಗಲೂ ಅವಳ ಮಾತನ್ನು ಲೆಕ್ಕಿಸದೆ ,ಈ ದೈತ್ಯಾಕಾನ ಸೂಚನೇಯಂತೆ ಮಧ್ಯಾಹ್ನದ ಊಟದಲ್ಲಿ ನಾನ್‌ವೆಜ್ ಮಾಂಸವನ್ನು ಬೆರೆಸಿ ನೀಡಲಾಯಿತು. ಇವಳು ಅದನ್ನು ತಿನ್ನುವಾಗ ಈ ದುರತ್ಮ ದುರ್ಯೋದನಂತೆ ಗಹಗಹಿಸಿ ನಕ್ಕನಂತೆ. ತು ಇವನೊಬ್ಬ ಹೆರನೋವುಗ ಮೃಗ ಎಂದು ಕಿಡಿಕಾರಿದ್ದಾರೆ.