ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಇಂದು ಕೋರ್ಟ್ ಅವರಿಗೆ ಜುಲೈ.4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಹೀಗಾಗಿ 2011ರ ಬಳಿಕ ನಟ ದರ್ಶನ್ ಮತ್ತೆ ಜೈಲುಪಾಲಾಗಿದ್ದಾರೆ.
ಇಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಆರೋಪಿಗಳಾದಂತ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನಲೆಯಲ್ಲಿ ವಿಚಾರಣೆಯನ್ನು ನಡೆಸಲಾಯಿತು.
ಈ ವಿಚಾರಣೆಯ ಬಳಿಕ ನಟ ದರ್ಶನ್, ವಿನಯ್, ಪ್ರದೋಷ್ ಹಾಗೂ ಧನರಾಜ್ ಅವರಿಗೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಜುಲೈ.4ರವರೆಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶಿಸಿದೆ. ಈ ಮೂಲಕ ನಟ ದರ್ಶನ್ ಕೂಡ ಪವಿತ್ರಾ ಗೌಡ ಬಳಿಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ.
BREAKING: ಕೋಲಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಓರ್ವ ಸಾಮೀಜಿ ಕೊಲೆ | Swamiji Murder
Good News: ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಉಚಿತವಾಗಿ ‘KSRTC ಬಸ್’ನಲ್ಲಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ