ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಅವರನ್ನು ನೋಡೋದಕ್ಕೆ ತೆರಳಿದ್ದಂತ ಪತ್ನಿ, ಮಗನನ್ನು ಕಂಡಂತ ಅವರು ಕಣ್ಣೀರಿಟ್ಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ.
ನಟ ವಿನೋದ್ ಪ್ರಭಾಕರ್ ಅವರನ್ನು ಭೇಟಿಯಾಗಿ ಕೆಲ ಕಾಲ ಚರ್ಚಿಸಿದ ನಂತ್ರ, ದರ್ಶನ್ ಮೌನಕ್ಕೆ ಶರಣಾಗಿದ್ದಾರೆ. ಅವರನ್ನು ಕೈ ಕುಲುಕಿ ಭೇಟಿಯಾಗಿ ಬಂದೆ ಅಂತ ಹೇಳಿದ್ದರು.
ಈ ಬಳಿಕ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪತ್ನಿ ವಿಜಯಲಕ್ಷ್ಮೀ, ಪುತ್ರ ಭೇಟಿಯಾದರು. ಪತ್ನಿ ಹಾಗೂ ಮಗನನ್ನು ನೋಡುತ್ತಿದ್ದಂತೇ, ಜೈಲಿನಲ್ಲಿ ನಟ ದರ್ಶನ್ ಕಣ್ಣೀರಿಟ್ಟಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ಕಣ್ಣೀರನ್ನು ನಟ ದರ್ಶನ್ ಹಾಕಿದ್ದಾರೆ. ಅಲ್ಲದೇ ಈ ಪ್ರಕರಣ ಸಂಬಂಧ ಪತ್ನಿಯ ಜೊತೆಗೆ ಕೆಲ ಕಾಲ ಮಾತುಕತೆಯನ್ನು ಅವರು ನಡೆಸಿದರು. ಪತ್ನಿ ಜೊತೆಗೆ ಮಾತನಾಡುವಾಗಲೂ ನಟ ದರ್ಶನ್ ಭಾವುಕರಾಗಿದ್ದರು ಎನ್ನಲಾಗುತ್ತಿದೆ.
ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕ್ಷಮೆ ಕೋರಲಿ, ರಾಹುಲ್ ಗಾಂಧಿ ತಲೆಬಾಗಿ ಕ್ಷಮೆ ಕೇಳಲಿ: ಆರ್.ಅಶೋಕ್ ಆಗ್ರಹ
BIG NEWS : ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ʻಫುಡ್ ಪಾರ್ಕ್ʼ ಸ್ಥಾಪಿಸುವಂತೆ ʻನಿಸ್ಸಿನ್ ಸಂಸ್ಥೆʼಗೆ ಆಹ್ವಾನ