ಬೆಂಗಳೂರು: ಕೊಲೆ ಪ್ರಕರಣದಲ್ಲಿ ಸದ್ಯ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ತನ್ನ ಜೊತೆಗಿರುವ ಸಹ ಕೈದಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ನಟ ದರ್ಶನ್ ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಲಕ್ಷ್ಮಣ್ ಜೊತೆಗೆ ಒಂದೇ ಸೆಲ್‌ನಲ್ಲಿ ಇದ್ದಾರೆ. ಈ ಪೈಕಿ ನಾಗರಾಜು ಅವರನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ ದರ್ಶನ್ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಇದಲ್ಲದೇ ಕೆಲ ದಿನಗಳ ಹಿಂಧೆ ಜಗ್ಗ ಹಾಗೂ ದರ್ಶನ್ ಮಧ್ಯೆ ದೊಡ್ಡ ಜಗಳ ಆಗಿದೆ ಎನ್ನಲಾಗಿದ್ದು, ಗಲಾಟೆ ಕೇಳಿಸಿಕೊಂಡ ಕಾರಗೃಹದ ಸಿಬ್ಬಂದಿ ಬಂದು ಜಗಳವನ್ನು ಬಿಡಿಸಿದ್ದಾರೆ ಎನ್ನಲಾಗಿದೆ. ಇದಲ್ಲದೇ ಸಹ ಖೈದಿಗಳನ್ನು ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ಬೈದು ತಮ್ಮ ದಬ್ಬಾಳಿಕೆಯನ್ನು ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇದಲ್ಲದೇ ಪರಪ್ಪನ ಅಗ್ರಹಾರದ ಜೈಲಿನಲ್ಲಿ ನಡೆದಿದ್ದ ಪಾರ್ಟಿ ವಿಡಿಯೋ ವೈರಲ್ ಆದ ಬೆನ್ನಲೇ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇದೇ ವೇಎ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡ ಬಳಿಕ ಜೈಲಿನಲ್ಲಿ ಈಗ ಮೊದಲಿನ ಹಾಗೇ ಏನು ನಡೆಯುತ್ತಿಲ್ಲ ಎನ್ನಲಾಗಿದೆ. ಈ ನಡುವೆ ದರ್ಶನ್‌ಗೆ ಕೂಡ ಅಧಿಕಾರಿಗಳು ಸರತಿ ಸಾಲಿನಲ್ಲಿ ಬಂದು ಊಟವನ್ನು ತೆಗೆದುಕೊಂಡು ಹೋಗಬೇಕು, ಜೊತೆಗೆ ತಮ್ಮ ಶೌಚಾಲಯವನ್ನು ತಾವೇ ತೊಳೆದುಕೊಳ್ಳಬೇಕು ಎನ್ನುವ ಆದೇಶವನ್ನು ನೀಡಿದ್ದು, ಇದು ದರ್ಶನ್ ಗೆ ಸಿಟ್ಟು ತರಿಸಿದೆ ಎನ್ನಲಾಗಿದೆ. ಇನ್ನೊಂದು ಕಡೆ ಟಾರ್ಚರ್ ತಡೆಯಲಾರದೆ ಅನುಕುಮಾರ್, ಜಗದೀಶ್ ಅವರು ತಮ್ಮನ್ನು ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡಿ ಅಂತ ನ್ಯಾಯಾಲಯಕ್ಕೆ ಇಲ್ಲವೇ ಪೊಲೀಸರಿಗೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.








