ಚಿತ್ರದುರ್ಗ: ಸ್ಯಾಂಡಲ್ ವುಡ್ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದಾರೆ. ಹಾಗಾದ್ರೇ ಕೊಲೆಯಾದ ರೇಣುಕಾಸ್ವಾಮಿ ಯಾರು? ಹತ್ಯೆಗೆ ಕಾರಣವೇನು? ಅನ್ನೋ ಬಗ್ಗೆ ಮುಂದೆ ಓದಿ.
ಪವಿತ್ರ ಗೌಡಗೆ ಅಶ್ಲೀಲ ಪೋಟೋ ಹಾಗೂ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ ಅವರನ್ನು ಅರೆಸ್ಟ್ ಮಾಡಲಾಗಿದೆ. ಚಿತ್ರದುರ್ಗ ನಗರದ ತುರುವನೂರು ರಸ್ತೆಯ ಮೊದನೇ ಕ್ರಾಸ್ ನ ನಿವಾಸಿಯಾಗಿರುವ ರೇಣುಕಸ್ವಾಮಿ ಅವರು ಮೆಡಿಕಲ್ ನಲ್ಲಿ ಕೆಲಸ ಮಾಡಿಕೊಂಡಿದ್ದನು.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಪ್ರಗತಿ ಗ್ರಾಮೀಣ ಬ್ಯಾಂಕ್ ಗಳಿರುವ ಮೆಡಿಕಲ್ ನಲ್ಲಿ ಮೃತ ರೇಣುಕಾ ಸ್ವಾಮಿ ಕೆಲಸ ಮಾಡಿಕೊಂಡಿದ್ದನು. ಕಳೆದ ಮೂರು ದಿನಗಳ ಹಿಂದೆ ದರ್ಶನ್ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಕೊಲೆ ಮಾಡಲಾಗಿದೆ.
ತುರುವನೂರು ರಸ್ತೆಯಲ್ಲಿರುವ ಮೃತನ ಮನೆಗೆ ಸ್ಥಳೀಯ ಚಿತ್ರದುರ್ಗ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಯಾರು ಇಲ್ಲದಿರುವುದು ತಿಳಿದು ಬಂದಿದೆ. ಮನೆಯ ಸದಸ್ಯರು ಎಲ್ಲರೂ ಬೆಂಗಳೂರಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ಮೃತನ ರೇಣುಕಾಸ್ವಾಮಿ ವಿವರ
ತಂದೆ – ಕಾಶಿನಾಥ್ ಶಿವನಗೌಡ ತಾಯಿ – ರತ್ನಪ್ರಭಾ
ತಂಗಿ – ಸುಚೇತಾ (ಸುಚಿತ್ರ) ಹೊಸಪೇಟೆಗೆ ಮದುವೆ ಮಾಡಿಕೊಟ್ಟಿರುತ್ತಾರೆ
ಮೃತನ ಹೆಂಡತಿ – ಸಹನ (ಗರ್ಭಿಣಿ)
ಒಂದಲ್ಲ, ಎರಡಲ್ಲ ‘ನಟ ದರ್ಶನ್’ಗೆ 3 ಕೇಸಲ್ಲಿ ಸಂಕಷ್ಟ: ಯಾವುವು? ಆರೋಪ ಸಾಬೀತಾದ್ರೆ ಶಿಕ್ಷೆ ಏನು? | Actor Darshan
‘ಮಾತು ಬರುತ್ತಿಲ್ಲ, ದರ್ಶನ್ಗಾಗಿ ಪ್ರಾರ್ಥಿಸುತ್ತೇನೆ’:ಆಘಾತ ಹೊರಹಾಕಿದ ನಟಿ ಸಂಜನಾ ಗಲ್ರಾನಿ | Darshan Arrest