ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 19 ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ವೇಳೆಯಲ್ಲಿ ಸ್ಯಾಂಡಲ್ ವುಡ್ ನಿಂದ ನಟ ದರ್ಶನ್ ಬ್ಯಾನ್ ಮಾಡಬೇಕು ಅನ್ನೋ ಕೂಗು ಎದ್ದಿದೆ. ಈ ಸಂದರ್ಭದಲ್ಲಿ ನಟ ಕಿಚ್ಚ ಸುದೀಪ್ ಏನು ಹೇಳಿದ್ರು ಅಂತ ಮುಂದೆ ಓದಿ.
ಇಂದು ನಟ ದರ್ಶನ್ ಚಿತ್ರರಂಗದಿಂದ ಬ್ಯಾನ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮೃತ ಕುಟುಂಬಕ್ಕೆ ನ್ಯಾಯಸಿಗಬೇಕು. ಚಿತ್ರರಂಗಕ್ಕೆ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಾಗಿರುವಂತ ರೇಣುಕಾಸ್ವಾಮಿ ಕೊಲೆಯಾಗಿದೆ. ನ್ಯಾಯ ದೊರಕಿಸಿ ಕೊಡುವಂತ ಕೆಲಸವನ್ನು ಫಿಲ್ಮಂ ಛೇಂಬರ್ ಮಾಡಬೇಕು. ಸ್ನೇಹಿತ ಇರಲೇ ಯಾರೇ ಇರಲಿ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ತರಬಾರದು. ಕಾನೂನಿನ ಮೇಲೆ ಜನರಿಗೆ ನಂಬಿಕೆ ಬರುವಂತ ಕೆಲಸವಾಗಬೇಕು ಎಂದರು.
ಸತ್ಯ ಹೊರ ತರಲು ಮಾಧ್ಯಮದವರು, ಪೊಲೀಸರು ಬಹಳಷ್ಟು ಪ್ರಯತ್ನಿಸಿದ್ದಾರೆ. ರೇಣುಕಾಸ್ವಾಮಿ ಪತ್ನಿಗೆ ನ್ಯಾಯಸಿಗಬೇಕು. ನಟ ದರ್ಶನ್ ಅವರನ್ನು ಆರೋಪ ಮುಕ್ತರಾದ ಬಳಿಕ ಚಿತ್ರರಂಗದಿಂದ ಬ್ಯಾನ್ ಮಾಡಲು ಆಗುತ್ತಾ ಅಂತ ಪ್ರಶ್ನಿಸಿದರು.
ನಟ ದರ್ಶನ್ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವುದಕ್ಕಿಂತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಪೊಲೀಸರು ಕ್ರಮವಹಿಸಬೇಕು. ಕನ್ನಡ ಚಿತ್ರರಂಗದವರು ಕೆಲಸ ಮಾಡಬೇಕು ಎಂಬುದಾಗಿ ಹೇಳಇದರು.
ಜಮ್ಮುವಿನಲ್ಲಿ ಪ್ರದೇಶ ಪ್ರಾಬಲ್ಯ ಮತ್ತು ಶೂನ್ಯ ಭಯೋತ್ಪಾದಕ ಯೋಜನೆಗಳನ್ನು ಜಾರಿಗೆ ತರಲು ಅಮಿತ್ ಶಾ ನಿರ್ದೇಶನ
ರೇಣುಕಾಸ್ವಾಮಿ ಹತ್ಯೆ ಕೇಸ್: ಎ1 ಆರೋಪಿ ಪವಿತ್ರಾ ಗೌಡ ನಿವಾಸದಲ್ಲಿ ಹಲವು ವಸ್ತುಗಳು ಪೊಲೀಸರು ವಶಕ್ಕೆ