ಬೆಂಗಳೂರು: ಸರಳ ವೈದ್ಯರಾಗಿ ಲೋಕಸಭಾ ಚುನಾವಣೆಗೆ ಇಳಿದಿ, ಬಿಜೆಪಿ ಪಕ್ಷದಿಂದ ಡಾ.ಸಿಎನ್ ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಇಂತಹ ಸರಣ ವೈದ್ಯ ಡಾ.ಮಂಜುನಾಥ್ ತಮ್ಮ ಅತಿಯಾದ ಹಣಕಾಸನ್ನು ಸಮರ್ಥಿಸಿಕೊಳ್ಳಬೇಕು ಅಂತ ನಟ ಚೇತನ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು ಸಾಮಾಜಿಕ ಕಾಳಜಿಗೆ ಹೆಸರುವಾಸಿಯಾದ ಡಾ.ಸಿಎನ್ ಮಂಜುನಾಥ ಅವರು ಸುಮಾರು 100 ಕೋಟಿ ರೂ ಆಸ್ತಿಯನ್ನು ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.
ವರ್ಷಕ್ಕೆ 20 ಲಕ್ಷ ಗಳಿಸುವ ಸರ್ಕಾರಿ ವೈದ್ಯರು 35 ವರ್ಷಗಳಲ್ಲಿ 7 ಕೋಟಿ ರೂ ಗಳಿಸುತ್ತಾರೆ. ಸೇವೆಯೇ ಆದ್ಯತೆಯಾಗಿದ್ದಾಗ ಒಬ್ಬರ ಬಳಿ ಇಷ್ಟೊಂದು ಹಣ ಇರುವುದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ಸರಳ ವೈದ್ಯರಾದ ಡಾ.ಸಿಎನ್ ಮಂಜುನಾಥ್ ಅವರು ತಮ್ಮ ಅತಿಯಾದ ಹಣಕಾಸನ್ನು ಸಮರ್ಥಿಸಿಕೊಳ್ಳಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) June 18, 2024