ಬೆಂಗಳೂರು: ಸ್ಯಾಂಡಲ್ ವುಡ್ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಇಂದು ನಿಧನರಾಗಿದ್ದರು. ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಮರಾಠ ಸಂಪ್ರದಾಯದಂತೆ ನೆರವೇರಿಸಲಾಯಿತು.
ಬೆಂಗಳೂರಿನ ಪೀಣ್ಯಾದಲ್ಲಿರುವಂತ ಚಿತಾಗಾರದಲ್ಲಿ ಮರಾಠಾ ಕ್ಷತ್ರೀಯ ಸಂಪ್ರದಾಯದಂತೆ ಕನ್ನಡದ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಅವರ ಅಂತ್ಯಕ್ರಿಯೆ ನೆರವೇರಿತು. ಈ ಸಂದರ್ಭದಲ್ಲಿ ಟೆನ್ನಿಸ್ ಕೃಷ್ಣ, ಗಣೇಶ್ ರಾವ್, ಡಿಂಗ್ರಿ ನಾಗರಾಜ್ ಸೇರಿದಂತೆ ಇತರರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದಂತ ಪುತ್ರ ಗುರುಪ್ರಸಾದ್ ಅವರು, ಇವತ್ತು ತಂದೆಯ ಅಂತ್ರಕ್ರಿಯೆಯನ್ನು ನೆರವೇರಿಸಲಾಗಿದೆ. ಬೆಳಗ್ಗೆಯಿಂದ ಎಲ್ಲರೂ ಬಂದು ಅಂತಿಮ ದರ್ಶನ ಮಾಡಿದ್ದಾರೆ. ಇಂತಹ ಕರ್ನಾಟಕ ಜನತೆಗೆ ಧನ್ಯವಾದಗಳು ಅಂತ ಹೇಳಿದರು.
ಇಷ್ಟು ವರ್ಷಗಳ ಕಾಲ ನಮ್ಮ ತಂದೆ ಬ್ಯಾಂಕ್ ಜನಾರ್ಧನ್ ಅವರನ್ನು ಹರಸಿ, ಹಾರೈಸಿ, ಪ್ರೋತ್ಸಾಹಿಸಿದ್ದೀರಿ. ನಮ್ಮ ತಂದೆ ಮತ್ತೆ ಇಲ್ಲೇ ಹುಟ್ಟಿ, ಇಲ್ಲೇ ಕಲಾವಿಧರಾಗಿ ಸೇವೆ ಸಲ್ಲಿಸಬೇಕು ಅನ್ನೋದು ನನ್ನ ಆಸೆ ಅಂತ ತಿಳಿಸಿದರು.
ಇನ್ನೂ ಮೂರು ದಿನಗಳ ಕಾರ್ಯವನ್ನು ಮಾಡುತ್ತೇವೆ. ಬುಧವಾರದಂದು ಬೆಳಗ್ಗೆ 8 ಗಂಟೆಗೆ ನಮ್ಮ ತಂದೆ ಬ್ಯಾಂಕ್ ಜನಾರ್ಧನ್ ಅವರ ಕಾರ್ಯ ನಡೆಯಲಿದೆ. ಆ ಬಳಿಕ ಅಸ್ಥಿಯನ್ನು ಶ್ರೀರಂಗಪಟ್ಟಣಕ್ಕೆ ಕೊಂಡೊಯ್ದು, ವಿಸರ್ಜನೆ ಮಾಡಲಾಗುತ್ತದೆ. ನಮ್ಮ ಮನೆಯಲ್ಲೇ 11ನೇ ದಿನದ ಕಾರ್ಯ ಕೂಡ ನೆರವೇರಲಿದೆ ಎಂಬುದಾಗಿ ಬ್ಯಾಂಕ್ ಜನಾರ್ಧನ್ ಪುತ್ರ ಗುರುಪ್ರಸಾದ್ ತಿಳಿಸಿದರು.
ಏಪ್ರಿಲ್ 16ಕ್ಕೆ ಕಲಬುರಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ: ಸಚಿವ ಡಾ.ಶರಣಪ್ರಕಾಶ ಪಾಟೀಲ