ಉಡುಪಿ: ಕನ್ನಡ ಖ್ಯಾತ ನಟ, ರಂಗಕರ್ಮಿ ರಾಜು ತಾಳಿಕೋಟೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಖ್ಯಾತ ನಟ, ರಂಗ ಕರ್ಮಿ ರಾಜು ತಾಳಿಕೋಟೆ ಅವರು ಇನ್ನಿಲ್ಲವಾಗಿದ್ದಾರೆ.
ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಅವರು ಇನ್ನಿಲ್ಲವಾಗಿದ್ದಾರೆ. ಅವರು ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿದ್ದರು.
ರಾಜು ತಾಳಿಕೋಟೆ ಅವರ ಪೂರ್ಣ ಹೆಸರು ರಾಜೇಸಾಬ್ ಮುಕ್ತುಮ್ ಸಾಬ್ ತಾಳಿಕೋಟೆಯಾಗಿತ್ತು. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿಯ ನಿವಾಸಿ ರಾಜು ತಾಳಿಕೋಟೆ ಆಗಿದ್ದರು.
ಪ್ರಸ್ತುತ ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ವಾಸವಿದ್ದರು. ಅವರ ಪ್ರಮುಖ ನಾಟಕಗಳೆಂದರೇ ಕಲಿಯುಗದ ಕುಡುಕ, ಕುಡುಕರ ಸಾಮ್ರಾಜ್ಯದ ಅಸಲಿ ಕುಡುಕ ಆಗಿದ್ದವು. ಪ್ರಮುಖ ನಾಟಕಗಳ ಆಡಿಯೋ ಕ್ಯಾಸೆಟ್ ಜನಪ್ರಿಯವಾಗಿದ್ದವು.
ಪ್ರಸ್ತುತ ಅವರು ಧಾರವಾಡದ ರಂಗಾಯಣದ ನಿರ್ದೇಶಕರಾಗಿದ್ದರು. ಇಂತಹ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ.