ಶಿವಮೊಗ್ಗ: ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಆಚರಣೆಗಿಂತ ಕಾರ್ಯಾಚರಣೆ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದಾಗಿ ಕುವೆಂಪು ವಿವಿಯ ಕನ್ನಡ ಭಾರತಿಯ ಹಿರಿಯ ಪ್ರಾಧ್ಯಾಪಕರಾದಂತ ಡಾ.ಜಿ ಪ್ರಶಾಂತ್ ನಾಯಕ ಹೇಳಿದ್ದಾರೆ.
ಇಂದು ಕುವೆಂಪು ವಿಶ್ವವಿದ್ಯಾಲಯ ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಡಾ. ಜಿ ಪ್ರಶಾಂತ್ ನಾಯಕ, ಹಿರಿಯ ಪ್ರಾಧ್ಯಾಪಕರು, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ, ಇವರು ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಆಚರಣೆಗಿಂತ ಕಾರ್ಯಾಚರಣೆ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಕನ್ನಡ ನಾಡು ನುಡಿಗಾಗಿ ನಾವೆಲ್ಲರೂ ಬದ್ಧವಾಗಿ ಮಾಡಬೇಕಾದ ಕಾರ್ಯಗಳು ಯಾವುವು ಎಂಬುದನ್ನು ಅತ್ಯಂತ ಮಾರ್ಮಿಕವಾಗಿ ಉದಾಹರಣೆಗಳ ಮೂಲಕ ಕನ್ನಡದ ಪ್ರಜ್ಞೆಯನ್ನು ಮೂಡಿಸುವ ತಮ್ಮ ವಿಶಿಷ್ಟ ಮಾತುಗಳನ್ನು ಆಡಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕಾಲೇಜಿನ ಪ್ರಾಂಶುಪಾಲರಾದ ಡಾ. ಮುತ್ತಯ್ಯ ಎಸ್.ಎಂ ಅವರು ಮಾತನಾಡಿ ಕನ್ನಡ ಸಾಹಿತ್ಯ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಸಂಭ್ರಮದ ಆಚರಣೆಗಳಿಗಿಂತ ಅತಿ ಹೆಚ್ಚು ಬೌದ್ಧಿಕ ಮತ್ತು ಸಾಹಿತಿಕ ಚಿಂತನೆಗಳಿಗೆ ಒತ್ತು ಕೊಟ್ಟಾಗ ಮಾತ್ರ ಕನ್ನಡವನ್ನು ಉಳಿಸಲು ಮತ್ತು ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಐ ಕ್ಯೂ ಎ ಸಿ ಸಂಚಾಲಕರಾದ ಪ್ರೊ. ಸಿ ಚನ್ನಪ್ಪ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಇತಿಹಾಸ ಉಪನ್ಯಾಸಕರಾದ ಡಾ. ಮಲ್ಲೇಶ್ ಎಂ ಪ್ರಾಸ್ತಾವಿಕ ನುಡಿ ಹೇಳಿದರು.
ಕನ್ನಡ ಪ್ರಾಧ್ಯಾಪಕರಾದ ಡಾ. ಟಿ. ವಸಂತ್ ಕುಮಾರ್ ಎಲ್ಲರನ್ನೂ ಸ್ವಾಗತಿಸಿದರು. ಡಿ.ಜಿ ವಿಶ್ವೇಶ್ವರಯ್ಯ ಸರ್ವರಿಗೂ ವಂದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ನಾಗರಾಜ್ ಹರಿಜನ್ ಕಾರ್ಯಕ್ರಮ ನಿರೂಪಿಸಿದರು.
ನಾನು ಆತ್ಮಸಾಕ್ಷಿ ನಂಬಿದ್ದೇನೆ, ಆತ್ಮಸಾಕ್ಷಿಗೆ ತಕ್ಕಂತೆ ನಾವು ಕೆಲಸ ಮಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್
SHOCKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಕೃತ್ಯ: ಹೆಣ್ಣುಮಗುವೆಂದು ಹಸುಗೂಸನ್ನೇ ಕೊಂದ ಪಾಪಿ ತಾಯಿ








