ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಎನ್ನುವಂತೆ ಎಲ್ಲಾ ಆಸ್ಪತ್ರೆಗಳಲ್ಲಿ 24×7 ಆರೋಗ್ಯ ಸೇವೆಗೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 24×7 ಸೇವೆ ದೊರೆಯುವ ನಿಟ್ಟಿನಲ್ಲಿ ತಲಾ ಒಬ್ಬರು ಸ್ತ್ರೀ ರೋಗ ತಜ್ಞರು, ಅರಿವಳಿಕೆ ತಜ್ಞರು ಹಾಗೂ ಒಬ್ಬರು ಅಥವಾ ಇಬ್ಬರು ಮಕ್ಕಳ ತಜ್ಞರು ಕಡ್ಡಾಯವಾಗಿ ಇರುವಂತೆ ಮಾಡಲು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.
ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 24×7 ಸೇವೆ ದೊರೆಯುವ ನಿಟ್ಟಿನಲ್ಲಿ ತಲಾ ಒಬ್ಬರು ಸ್ತ್ರೀ ರೋಗ ತಜ್ಞರು, ಅರಿವಳಿಕೆ ತಜ್ಞರು ಹಾಗೂ ಒಬ್ಬರು ಅಥವಾ ಇಬ್ಬರು ಮಕ್ಕಳ ತಜ್ಞರು ಕಡ್ಡಾಯವಾಗಿ ಇರುವಂತೆ ಮಾಡಲು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.@CMofKarnataka @siddaramaiah… pic.twitter.com/5Q9Iwz8DzJ
— DIPR Karnataka (@KarnatakaVarthe) August 2, 2025
ಗೊರಗುಂಟೆಪಾಳ್ಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ರೋಗಿಯೊಬ್ಬರನ್ನು ಖಾಸಗಿ ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲು 8500 ರೂ. ವಸೂಲಿ ಮಾಡಿರುವ ಅತ್ಯಂತ ಅಮಾನವೀಯ ಘಟನೆ ಬಗ್ಗೆ ಪಬ್ಲಿಕ್ ಟಿ.ವಿ ಬೆಳಕು ಚೆಲ್ಲಿದೆ. ಖಾಸಗಿ ಅಂಬ್ಯುಲೆನ್ಸ್ ಗಳು ದುಬಾರಿ ದರ ವಿಧಿಸುತ್ತಿರುವುದನ್ನು ಈಗಾಗಲೇ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಂಬ್ಯುಲೆನ್ಸ್ ಸೇವೆಯನ್ನು ಕೆಪಿಎಂಇ ಕಾಯ್ದೆಯಡಿ ತರಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಖಾಸಗಿ ಅಂಬ್ಯುಲೆನ್ಸ್ ಗಳ ಗುಣಮಟ್ಟ ಹಾಗೂ ಶುಲ್ಕ ನಿಗದಿಗೆ ಆರೋಗ್ಯ ಇಲಾಖೆ ಅಗತ್ಯ ಮಾನದಂಡಗಳನ್ನು ರೂಪಿಸಲಿದೆ. ವ್ಯವಸ್ಥೆ ಸರಿದಾರಿಯಲ್ಲಿದ್ದಾಗ ಯಾವುದೇ ನಿರ್ಬಂಧದ ಅವಶ್ಯಕತೆ ಇರುವುದಿಲ್ಲ. ಆದರೆ ಲೋಪದೋಷಗಳು ಮಿತಿ ಮೀರಿದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದಿಂದ ಅಂಕುಶ ಹಾಕುವುದು ಅನಿವಾರ್ಯ. ಆರೋಗ್ಯ ಕ್ಷೇತ್ರದಲ್ಲಿ ಇಂದು ಖಾಸಗಿ ವಲಯ ಗುಣಮಟ್ಟದ ಸೇವೆಯನ್ನ ಒದಗಿಸುತ್ತಿದೆ ನಿಜ. ಆದರೆ, ಆರೋಗ್ಯ ಕ್ಷೇತ್ರವನ್ನ ಕೇವಲ ವ್ಯವಹಾರ ದೃಷ್ಟಿಕೋನದಿಂದ ನೋಡದೆ ಸೇವಾಮನೋಭಾವದಿಂದ ನೋಡಬೇಕು ಎಂದು ಮನವಿ ಮಾಡಿದ್ದಾರೆ.
BIG NEWS: ಸಾಗರ ತಾಯಿ ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’ ಕೇಸ್: ಆರೋಗ್ಯ ಇಲಾಖೆ ‘ಕಚೇರಿ ಅಧೀಕ್ಷಕ’ನೇ ಸಾಥ್
BREAKING: ಯುಜಿಸಿಇಟಿ/ನೀಟ್ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ: ಇಂದಿನಿಂದಲೇ ಪ್ರವೇಶ ಪ್ರಕ್ರಿಯೆ ಆರಂಭ
BREAKING : ಧರ್ಮಸ್ಥಳ ಪ್ರಕರಣ : ಸಿಎಸ್ ಶಾಲಿನಿ ರಜನೀಶ್ ಭೇಟಿಯಾದ ‘SIT’ ಮುಖ್ಯಸ್ಥ ಪ್ರಣವ್ ಮೋಹಂತಿ