Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾತುಕೋಳಿ ಹೊಟ್ಟೆಯಲ್ಲಿ ₹1.62 ಲಕ್ಷ ಮೌಲ್ಯದ ಚಿನ್ನ ಪತ್ತೆ : ಹೊಟ್ಟೆ ಕತ್ತರಿಸಿದಾಗ ಸಿಕ್ಕಿತು 10 ಗ್ರಾಂ ಗೋಲ್ಡ್ !

10/03/2026 5:54 AM

ರಾಜ್ಯದಲ್ಲಿ `ಸರ್ಕಾರಿ ಔಷಧಿ’ ಖರೀದಿಸದ ವೈದ್ಯಾಧಿಕಾರಿ ವಿರುದ್ಧ ಕ್ರಮ : ಆರೋಗ್ಯ ಇಲಾಖೆ ಖಡಕ್ ಆದೇಶ !

10/03/2026 5:50 AM

GOOD NEWS : ರಾಜ್ಯದಲ್ಲಿ ಶೀಘ್ರವೇ 15 ಸಾವಿರ `ಶಿಕ್ಷಕರ ನೇಮಕಾತಿ’ : ಸಚಿವ ಮಧು ಬಂಗಾರಪ್ಪ

10/03/2026 5:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ `ಸರ್ಕಾರಿ ಔಷಧಿ’ ಖರೀದಿಸದ ವೈದ್ಯಾಧಿಕಾರಿ ವಿರುದ್ಧ ಕ್ರಮ : ಆರೋಗ್ಯ ಇಲಾಖೆ ಖಡಕ್ ಆದೇಶ !
KARNATAKA

ರಾಜ್ಯದಲ್ಲಿ `ಸರ್ಕಾರಿ ಔಷಧಿ’ ಖರೀದಿಸದ ವೈದ್ಯಾಧಿಕಾರಿ ವಿರುದ್ಧ ಕ್ರಮ : ಆರೋಗ್ಯ ಇಲಾಖೆ ಖಡಕ್ ಆದೇಶ !

By kannadanewsnow5710/03/2026 5:50 AM

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಲು ಮತ್ತು ತುರ್ತು ಸಂದರ್ಭಗಳಲ್ಲಿ ಸ್ಥಳೀಯವಾಗಿ ಔಷಧಿ ಖರೀದಿಸಲು ನಿರಾಕರಿಸುವ ವೈದ್ಯಾಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಸ್ಥಳೀಯ ಖರೀದಿಗೆ ಅಧಿಕಾರ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ABArK) ಯೋಜನೆ ಹಾಗೂ ಆರೋಗ್ಯ ರಕ್ಷಾ ಸಮಿತಿ (ARS) ನಿಧಿಯನ್ನು ಬಳಸಿ ಆಸ್ಪತ್ರೆಗೆ ಅಗತ್ಯವಿರುವ ಔಷಧಿಗಳನ್ನು ಸ್ಥಳೀಯವಾಗಿ ಖರೀದಿಸಲು ಆಡಳಿತ ವೈದ್ಯಾಧಿಕಾರಿಗಳಿಗೆ ಈಗಾಗಲೇ ಅಧಿಕಾರ ನೀಡಲಾಗಿದೆ.

ಸಂಘದ ಪತ್ರಕ್ಕೆ ಸರ್ಕಾರದ ಆಕ್ಷೇಪ: ಇತ್ತೀಚೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು “ಸರ್ಕಾರ ಪೂರೈಸುವ ಔಷಧಿಗಳನ್ನು ಮಾತ್ರ ಬಳಸಬೇಕು, ಸ್ಥಳೀಯವಾಗಿ ಖರೀದಿ ಮಾಡಬಾರದು” ಎಂದು ಸೂಚನೆ ನೀಡಿತ್ತು. ಇದನ್ನು ಸರ್ಕಾರವು ‘ನಿಯಮಬಾಹಿರ’ ಮತ್ತು ‘ಏಕಪಕ್ಷೀಯ ನಿರ್ಧಾರ’ ಎಂದು ಕರೆದಿದೆ.

ದುರ್ನಡತೆ ಎಂದು ಪರಿಗಣನೆ: ಒಂದು ವೇಳೆ ವೈದ್ಯಾಧಿಕಾರಿಗಳ ಸಂಘದ ತೀರ್ಮಾನಕ್ಕೆ ಕಟ್ಟುಬಿದ್ದು, ಯಾವುದೇ ಆಸ್ಪತ್ರೆಯ ವೈದ್ಯಾಧಿಕಾರಿಗಳು ಅಗತ್ಯ ಔಷಧಿಗಳ ಖರೀದಿಗೆ ನಿರಾಕರಿಸಿದರೆ, ಅದನ್ನು KCSR ನಿಯಮಗಳಡಿ ‘ದುರ್ನಡತೆ’ ಎಂದು ಪರಿಗಣಿಸಲಾಗುವುದು. ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಸಾರ್ವಜನಿಕರ ಹಿತದೃಷ್ಟಿ: ಔಷಧಿ ಕೊರತೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. KTPP ನಿಯಮದಂತೆ ಇ-ಪ್ರೊಕ್ಯೂರ್‌ಮೆಂಟ್ ಅಥವಾ GeM ಪೋರ್ಟಲ್ ಮೂಲಕ ಔಷಧಿ ಖರೀದಿಸಲು ARS ಸಮಿತಿಯ ಅಧ್ಯಕ್ಷರಿಗೆ ಸೂಚಿಸಲಾಗಿದೆ.

ಜವಾಬ್ದಾರಿ ಹಂಚಿಕೆ:

ತಾಲ್ಲೂಕು ಆಸ್ಪತ್ರೆಗಳಲ್ಲಿ ಉಪವಿಭಾಗಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಈ ಬಗ್ಗೆ ನಿಗಾವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ.

Action against medical officer who does not purchase 'government medicine' in the state: Health Department orders strict action!
Share. Facebook Twitter LinkedIn WhatsApp Email

Related Posts

ಬಾತುಕೋಳಿ ಹೊಟ್ಟೆಯಲ್ಲಿ ₹1.62 ಲಕ್ಷ ಮೌಲ್ಯದ ಚಿನ್ನ ಪತ್ತೆ : ಹೊಟ್ಟೆ ಕತ್ತರಿಸಿದಾಗ ಸಿಕ್ಕಿತು 10 ಗ್ರಾಂ ಗೋಲ್ಡ್ !

10/03/2026 5:54 AM1 Min Read

GOOD NEWS : ರಾಜ್ಯದಲ್ಲಿ ಶೀಘ್ರವೇ 15 ಸಾವಿರ `ಶಿಕ್ಷಕರ ನೇಮಕಾತಿ’ : ಸಚಿವ ಮಧು ಬಂಗಾರಪ್ಪ

10/03/2026 5:38 AM1 Min Read

BIG NEWS : ರಾಜ್ಯದಲ್ಲಿ `ಭ್ರೂಣ ಹತ್ಯೆ’ ಬಗ್ಗೆ ಮಾಹಿತಿದಾರರಿಗೆ 1 ಲಕ್ಷ ರೂ. ಬಹುಮಾನ : ದಿನೇಶ್ ಗುಂಡೂರಾವ್ ಘೋಷಣೆ

10/03/2026 5:34 AM1 Min Read
Recent News

ಬಾತುಕೋಳಿ ಹೊಟ್ಟೆಯಲ್ಲಿ ₹1.62 ಲಕ್ಷ ಮೌಲ್ಯದ ಚಿನ್ನ ಪತ್ತೆ : ಹೊಟ್ಟೆ ಕತ್ತರಿಸಿದಾಗ ಸಿಕ್ಕಿತು 10 ಗ್ರಾಂ ಗೋಲ್ಡ್ !

10/03/2026 5:54 AM

ರಾಜ್ಯದಲ್ಲಿ `ಸರ್ಕಾರಿ ಔಷಧಿ’ ಖರೀದಿಸದ ವೈದ್ಯಾಧಿಕಾರಿ ವಿರುದ್ಧ ಕ್ರಮ : ಆರೋಗ್ಯ ಇಲಾಖೆ ಖಡಕ್ ಆದೇಶ !

10/03/2026 5:50 AM

GOOD NEWS : ರಾಜ್ಯದಲ್ಲಿ ಶೀಘ್ರವೇ 15 ಸಾವಿರ `ಶಿಕ್ಷಕರ ನೇಮಕಾತಿ’ : ಸಚಿವ ಮಧು ಬಂಗಾರಪ್ಪ

10/03/2026 5:38 AM

BIG NEWS : ರಾಜ್ಯದಲ್ಲಿ `ಭ್ರೂಣ ಹತ್ಯೆ’ ಬಗ್ಗೆ ಮಾಹಿತಿದಾರರಿಗೆ 1 ಲಕ್ಷ ರೂ. ಬಹುಮಾನ : ದಿನೇಶ್ ಗುಂಡೂರಾವ್ ಘೋಷಣೆ

10/03/2026 5:34 AM
State News
KARNATAKA

ಬಾತುಕೋಳಿ ಹೊಟ್ಟೆಯಲ್ಲಿ ₹1.62 ಲಕ್ಷ ಮೌಲ್ಯದ ಚಿನ್ನ ಪತ್ತೆ : ಹೊಟ್ಟೆ ಕತ್ತರಿಸಿದಾಗ ಸಿಕ್ಕಿತು 10 ಗ್ರಾಂ ಗೋಲ್ಡ್ !

By kannadanewsnow5710/03/2026 5:54 AM KARNATAKA 1 Min Read

ಬೀಜಿಂಗ್: ‘ಬಂಗಾರದ ಮೊಟ್ಟೆ ಇಡುವ ಬಾತುಕೋಳಿ’ಯ ಕಥೆಯನ್ನು ನಾವು ಕೇಳಿದ್ದೇವೆ. ಆದರೆ ಚೀನಾದಲ್ಲಿ ನಿಜವಾಗಿಯೂ ಬಾತುಕೋಳಿಯ ಹೊಟ್ಟೆಯಲ್ಲಿ ಭಾರಿ ಪ್ರಮಾಣದ…

ರಾಜ್ಯದಲ್ಲಿ `ಸರ್ಕಾರಿ ಔಷಧಿ’ ಖರೀದಿಸದ ವೈದ್ಯಾಧಿಕಾರಿ ವಿರುದ್ಧ ಕ್ರಮ : ಆರೋಗ್ಯ ಇಲಾಖೆ ಖಡಕ್ ಆದೇಶ !

10/03/2026 5:50 AM

GOOD NEWS : ರಾಜ್ಯದಲ್ಲಿ ಶೀಘ್ರವೇ 15 ಸಾವಿರ `ಶಿಕ್ಷಕರ ನೇಮಕಾತಿ’ : ಸಚಿವ ಮಧು ಬಂಗಾರಪ್ಪ

10/03/2026 5:38 AM

BIG NEWS : ರಾಜ್ಯದಲ್ಲಿ `ಭ್ರೂಣ ಹತ್ಯೆ’ ಬಗ್ಗೆ ಮಾಹಿತಿದಾರರಿಗೆ 1 ಲಕ್ಷ ರೂ. ಬಹುಮಾನ : ದಿನೇಶ್ ಗುಂಡೂರಾವ್ ಘೋಷಣೆ

10/03/2026 5:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.