ಬೆಂಗಳೂರು: ನಗರದಲ್ಲಿ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆಯ ಪೊಲೀಸರು ಆರೋಪಿ ವಿಘ್ನೇಶ್ ಎಂಬಾತನನ್ನು ಬಂಧಿಸಿದ್ದಾರೆ.
ನವೆಂಬರ್.7ರಂದು ರಾತ್ರಿ 10.30ರ ವೇಳೆಗೆ ಸಾಕು ನಾಯಿ ಜೊತೆ ಮಹಿಳೆ ವಾಕಿಂಗ್ ತೆರಳಿದ್ದರು. ಈ ವೇಳೆ ನಾಯಿ ಮುದ್ದು ಮಾಡೋ ನೆಪದಲ್ಲಿ ಮಹಿಳೆಯ ಜೊತೆಗೆ ಅಸಭ್ಯವಾಗಿ ಆರೋಪಿ ವಿಘ್ನೇಶ್ ವರ್ತಿಸಿದ್ದಾನೆ. ಈ ವೇಳೆ ಗಾಬರಿಗೊಂಡು ಮೊಬೈಲ್ ಅನ್ನು ಮಹಿಳೆ ಕೆಳಗೆ ಬೀಳಿಸಿಕೊಂಡಿದ್ದಾರೆ.
ಕೆಳಗೆ ಬಿದ್ದಂತ ಮಹಿಳೆಯ ಮೊಬೈಲ್ ಕೂಡ ಆರೋಪಿ ವಿಘ್ನೇಶ್ ಕದ್ದು ಪರಾರಿಯಾಗಿದ್ದನು. ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿ ವಿಘ್ನೇಶ್ ಬಂಧಿಸಿ, ಮೊಬೈಲ್ ವಶಕ್ಕೆ ಪೊಲೀಸರು ಪಡೆದಿದ್ದಾರೆ.
ಹಿರಿಯ ಪತ್ರಕರ್ತ ನಾಡಿಗ್ ಚಿಕಿತ್ಸೆಗೆ 94,000 ಬಿಡುಗಡೆ ಮಾಡಿದ ಸಿಎಂ ಸಿದ್ಧರಾಮಯ್ಯ: KUWJ ಅಧ್ಯಕ್ಷ ತಗಡೂರು ಧನ್ಯವಾದ
BREAKING : ರಾಜ್ಯ ಸಚಿವ ಸಂಪುಟ ಪುನಾರಚನೆ ಸದ್ಯಕ್ಕಿಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ








