ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಬಟ್ಟೆಯ ಬಗ್ಗೆ ಅಶ್ಲೀಲವಾಗಿ ವೇಶ್ಯೆ ಎಂಬುದಾಗಿ ಕಾಮೆಂಟ್ ಮಾಡಲಾಗಿತ್ತು. ಈ ಬಗ್ಗೆ ಶಾಸಕಿ ನಯನಾ ಮೋಟಮ್ಮ ಅವರು ಬೇಸರ ವ್ಯಕ್ತ ಪಡಿಸಿದ್ದರು. ಈ ಬೆನ್ನಲ್ಲೇ ಅಶ್ಲೀಲ ಕಾಮೆಂಟ್ ಮಾಡಿದಂತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಾಸಕಿ ನಯನಾ ಮೋಟಮ್ಮ ಅವರು ಉಡುಪಿ ವಿಚಾರವಾಗಿ ಇನ್ಟಾಗ್ರಾಂನಲ್ಲಿ ಹಾಕಿದ್ದಂತ ಪೋಸ್ಟ್ ಗೆ ಅವಹೇಳನಕಾರಿಯಾಗಿ ಅಶ್ಲೀಲ ಕಾಮೆಂಟ್ ಮಾಡಲಾಗಿತ್ತು. ಶಾಸಕಿಯ ಬಟ್ಟೆಯ ಬಗ್ಗೆ ಕಾಮೆಂಟ್ ಮಾಡಿದ್ದಂತ ಆರೋಪಿಯೊಬ್ಬ ವೇಶ್ಯ ಎನ್ನುವಂತ ಪದ ಕೂಡ ಬಳಸಿದ್ದನು. ಈ ಹಿನ್ನಲೆಯಲ್ಲಿ ಶಾಸಕಿ ನಯನಾ ಮೋಟಮ್ಮ ಅವರ ಪಿಎ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಹಿನ್ನಲೆಯಲ್ಲಿ ಪೊಲೀಸರು ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.








