ಮಂಡ್ಯ: ಜಿಲ್ಲೆಯಲ್ಲಿ ಶೇಖರಿಸಿಟ್ಟಿದ್ದಂತ ಕೊಬ್ಬರಿ ಗೋದಾಮಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ಕೊಬ್ಬರಿ ಸುಟ್ಟು ಕರಕಲಾಗಿದೆ.
ಮಂಡ್ಯ ತಾಲ್ಲೂಕಿನ ಗುನ್ನಾಯಕನಹಳ್ಳಿಯಲ್ಲಿ ಈ ಅವಘಡ ಸಂಭವಿಸಿದೆ. ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಕೊಬ್ಬರಿ ಸುಟ್ಟುಕರಕಲಾಗಿದೆ.
ಗ್ರಾಮಸ್ಥರಾದಂತ ಪ್ರಸನ್ನ ಎಂಬುವರಿಗೆ ಸೇರಿದ ಕೊಬ್ಬರಿ ಶೆಡ್ ಇದಾಗಿದೆ. ಸುತ್ತಮುತ್ತಲಿನ ಗ್ರಾಮದ ರೈತರಿಂದ ಕೊಬ್ಬರಿ ಖರೀದಿಸಿ ಶೇಖರಿಸಿದ್ದರು. ಗೋದಾಮಿನಲ್ಲಿ ಕೊಬ್ಬರಿ ಸಂಗ್ರಹಿಸಿಟ್ಟಿದ್ದರು.
ಗೋದಾಮಿಗೆ ಕಿಡಿಗೇಡಿಗಳು ಬೆಂಕಿಹಚ್ಚಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. 16 ಟನ್ ಕೊಬ್ಬರಿ, 6 ಟನ್ ಗ್ರೌಟ್ ಸುಟ್ಟು ಕರಕಲು ಆಗಿದೆ. ಈ ಘಟನೆಯಿಂದ 55 ಲಕ್ಷ ಮೌಲ್ಯದ ಕೊಬ್ಬರಿ ಭಸ್ಮವಾಗಿದೆ. ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸೋ ಕೆಲಸದಲ್ಲಿ ತೊಡಗಿದ್ದಾರೆ.
ಚಳಿಗಾಲದಲ್ಲಿಯೇ ಹೃದಯಾಘಾತ ಹೆಚ್ಚೇಕೆ? ಅಪಾಯಗಳನ್ನು ತಪ್ಪಿಸಲು ತಜ್ಞರು ನೀಡಿದ ಟಾಪ್ 5 ಸಲಹೆಗಳು!








