ನವದೆಹಲಿ : ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪಕ್ಷದ ವಿರುದ್ಧ ಮಾಡಿರುವ ಕುದುರೆ ವ್ಯಾಪಾರದ ಆರೋಪಗಳನ್ನ “ಬಹಳ ಗಂಭೀರವಾಗಿ” ಪರಿಗಣಿಸುವುದಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಶುಕ್ರವಾರ ಹೇಳಿದೆ.
ಅಂದ್ಹಾಗೆ, ಎಎಪಿಯ 16 ಅಭ್ಯರ್ಥಿಗಳಿಗೆ ಸಚಿವ ಸ್ಥಾನ ಮತ್ತು ಪಕ್ಷ ತೊರೆದು ಬಿಜೆಪಿ ಸೇರಿದರೆ ತಲಾ 15 ಕೋಟಿ ರೂ.ಗಳ ಆಮಿಷ ಒಡ್ಡುವುದಾಗಿ ಕರೆಗಳು ಬಂದಿವೆ ಎಂದು ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.
“ಕುದುರೆ ವ್ಯಾಪಾರದ ಆರೋಪಗಳನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಪಕ್ಷವು ಅದರ ಬಗ್ಗೆ ದೂರು ದಾಖಲಿಸಿದೆ. ಈ ಆರೋಪಗಳಿಗೆ ಆಧಾರವೇನು? ಇದನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.
ಎಎಪಿ ಸಂಸದ ಸಂಜಯ್ ಸಿಂಗ್ ಅವರು ಭ್ರಷ್ಟಾಚಾರ ನಿಗ್ರಹ ದಳ (ACB) ಕಚೇರಿಯ ಹೊರಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿಜೆಪಿ ವಿರುದ್ಧ ದೂರು ನೀಡಲು ಬಂದಿದ್ದೇನೆ ಎಂದು ಹೇಳಿದರು. ಅದ್ರಂತೆ, ಸಿಂಗ್ ಲಿಖಿತ ದೂರು ದಾಖಲಿಸಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ರಾಜ್ಯದ ಜನರೇ ಗಮನಿಸಿ : `ಯಶಸ್ವಿನಿ ಯೋಜನೆ’ ನೋಂದಣಿಗೆ ಈ ದಾಖಲೆಗಳು ಕಡ್ಡಾಯ.!
BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಇದೇ ಮೊದಲ ಬಾರಿಗೆ 87 ಸಾವಿರ ಗಡಿ ದಾಟಿದ ಚಿನ್ನದ ಬೆಲೆ | Gold price
ಇನ್ಮುಂದೆ ಕೇಂದ್ರ ಸರ್ಕಾರದಿಂದ್ಲೇ ತಿಂಗಳಿಗೊಮ್ಮೆ ‘ನಿರುದ್ಯೋಗಿ’ಗಳ ಅಂಕಿ-ಅಂಶ ರಿಲೀಸ್