ಬೆಂಗಳೂರು: ಇಂದು ಹೈಕೋರ್ಟ್ ಕರ್ನಾಟಕ ಎಸಿಬಿಯನ್ನು ( Karnataka ACB ) ರದ್ದು ಪಡಿಸಿತ್ತು. ಅಲ್ಲದೇ ಲೋಕಾಯುಕ್ತವನ್ನು ಮರುಸ್ಥಾಪಿಸಿ ಆದೇಶಿಸಿತ್ತು. ಈ ಮೂಲಕ ಹೈಕೋರ್ಟ್ ( Karnataka High Court ) ಲೋಕಾಯುಕ್ತ ಪೊಲೀಸರಿಗೆ ಬಲ ನೀಡಿ ಆದೇಶಿಸಿತ್ತು. ಈ ಬಗ್ಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ( Justice Santhosh Hegde ) ಏನ್ ಹೇಳಿದ್ರು ಅಂತ ಮುಂದೆ ಓದಿ..

ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹೈಕೋರ್ಟ್ ಆದೇಶ ಸಂತಸ ತಂದಿದೆ. ಎಸಿಬಿ ವಿಚಾರದಲ್ಲಿ ಹೈಕೋರ್ಟ್ ಉತ್ತಮ ನಿರ್ಧಾರ ಕೈಗೊಂಡಿದೆ ಎಂದರು.

BREAKING NEWS: ಆ.15ರಂದು ಸರ್ಕಾರದಿಂದಲೇ ‘ಚಾಮರಾಜಪೇಟೆ ಈದ್ಗಾ ಮೈದಾನ’ದಲ್ಲಿ ‘ಧ್ವಜಾರೋಹಣ’ – ಸಚಿವ ಆರ್ ಅಶೋಕ್ ಘೋಷಣೆ

ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರಿ ನೀಡಬೇಕು. ಉತ್ತಮ ಅಧಿಕಾರಿಗಳನ್ನು ಲೋಕಾಯುಕ್ತ ಸಂಸ್ಥೆಗೆ ನೇಮಿಸಬೇಕು. ಸರ್ಕಾರ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಬಾರದು. ಅಧಿಕಾರಿಗಳನ್ನು ಲೋಕಾಯುಕ್ತವೇ ನೇಮಿಸಿಕೊಳ್ಳುವಂತೆ ಆಗಬೇಕು. ಅಧಿಕಾರದ ಜೊತೆಗೆ ಲೋಕಾಯುಕ್ತಕ್ಕೆ ಸೌಲಭ್ಯ ಕೊಡಬೇಕು ಎಂದರು.

ಲೋಕಾಯುಕ್ತರು ತಮಗೆ ಕೊಟ್ಟ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಬೇಕು. ಇಲ್ಲವಾದರೇ ನಾನೇ ಲೋಕಾಯುಕ್ತ ಸಂಸ್ಥೆಯ ಆಡಳಿತ ವೈಖರಿಯ ಬಗ್ಗೆ ವಿರೋಧಿಸಿ, ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ನೀಡಿದರು.

‘ಲಾಲ್ ಬಾಗ್ ಪ್ಲವರ್ ಶೋ’ಗೆ ತೆರಳುವ ಜನರಿಗೆ ಗುಡ್ ನ್ಯೂಸ್: ‘ಮೆಟ್ರೋ ರೈಲಿ’ನಲ್ಲಿ ಮನೆಗೆ ವಾಪಾಸ್ ತೆರಳಲು ‘ಪೇಪರ್ ಟಿಕೆಟ್’ ವ್ಯವಸ್ಥೆ

Share.
Exit mobile version