ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನಲ್ಲಿ ತೆರವಾಗಿರುವ ನಾಲ್ಕು ನಾಮನಿರ್ದೇಶನ ಸ್ಥಾನಗಳಲ್ಲಿ ಅಲೆಮಾರಿ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯತೆ ನೀಡಬೇಕೆಂದು ಆಗ್ರಹಿಸಿ ಎಐಸಿಸಿ ಅಧಿನಾಯಕ ರಾಹುಲ್ ಗಾಂಧಿರವರಿಗೆ ಪತ್ರ ಬರೆಯುವ ಮೂಲಕ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸರ್ಕಾರ ಜಾರಿಗೆ ತಂದಿರುವ ಇತ್ತೀಚಿನ ಒಳ ಮೀಸಲಾತಿಯಲ್ಲಿ ಅಲೆಮಾರಿ ಜನಾಂಗಕ್ಕೆ ಸಾಕಷ್ಟು ಅನ್ಯಾಯವಾಗಿದೆ ಎಂಬ ಕೂಗು ಎಲ್ಲೆಡೆ ಕಂಡುಬರುತ್ತಿದೆ. ಸಾಕಷ್ಟು ಪ್ರತಿಭಟನೆಗಳು ಈಗಾಗಲೇ ನಡೆದಿದೆ. ನಮ್ಮ ಪಕ್ಷವೂ ಸಹ ಈ ಪ್ರತಿಭಟನೆಗಳಲ್ಲಿ ಸಾಕಷ್ಟು ಬಾರಿ ಭಾಗವಹಿಸಿ ಅವರ ಹಕ್ಕೊತ್ತಾಯ ಗಳಿಗೆ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ.
ಒಳ ಮೀಸಲಾತಿಯಲ್ಲಿ ಅಲೆಮಾರಿ ಜನಾಂಗಗಳಿಗೆ ಅನ್ಯಾಯ ಸರಿಪಡಿಸುವ ದಿಶೆಯಲ್ಲಿ ನಾಮನಿರ್ದೇಶನ ವಾಗುವ ವಿಧಾನಪರಿಷತ್ ಸ್ಥಾನಗಳಲ್ಲಿ ಈ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯತೆ ನೀಡಿ ಮೇಲೆತ್ತುವ ಕೆಲಸ ಆಗಬೇಕು. ಸಮಬಾಳು ಸಮಪಾಲು ಎಂದು ಸದಾ ಪ್ರತಿಪಾದಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಇತ್ತ ಕಡೆ ಗಮನಹರಿಸಬೇಕೆಂಬ ಒತ್ತಡವನ್ನು ಎಲ್ಲರೂ ಹಾಕಬೇಕಿದೆ ಎಂದು ಸೀತಾರಾಮ ಗುಂಡಪ್ಪ ಒತ್ತಾಯಿಸಿದರು.
ಪತ್ನಿ ಕಪ್ಪು, ದಪ್ಪವಾಗಿದ್ದಾಳೆಂದು ಜೀವಂತವಾಗಿ ಸುಟ್ಟ ಪತಿಗೆ ಮರಣದಂಡನೆ ವಿಧಿಸಿದ ಕೋರ್ಟ್