ಜಮ್ಶೆಡ್‌ಪುರ (ಜಾರ್ಖಂಡ್): ಎಲ್ಲೆಡೆ ಗಣೇಶ ಹಬ್ಬವನ್ನು ಆಚರಿಲಾಗಿದ್ದು, ವಿವಿಧ ರೀತಿಯ ಗಣೇಶ ವಿಗ್ರಹ ಸ್ಥಾಪಿಸುವ ಮೂಲಕ ಸಂಭ್ರಮಿಸಿದ್ದಾರೆ. ಆದ್ರೆ, ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ಆಧಾರ್ ಕಾರ್ಡ್‌ ರೀತಿಯ ಪೆಂಡಾಲ್‌ ನಿರ್ಮಿಸಿ, ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಇದರ ವಿಶೇಷತೆ ಅಂದ್ರೆ, ಕೈಲಾಸದಲ್ಲಿರುವ ಗಣೇಶನ ವಿಳಾಸ ಮತ್ತು ಅವನ ದಿನಾಂಕವನ್ನು ಗುರುತಿಸಲಾಗಿದೆ.

ಆಧಾರ್‌ ಕಾರ್ಡ್‌ ರೀತಿಯ ಪೆಂಡಾಲ್‌ ನಿರ್ಮಿಸಲಾಗಿದೆ. ಅದರೊಳಗೆ ಗಣೇಶನ ವಿಗ್ರಹವನ್ನು ಇರಿಸಲಾಗಿದೆ. ಅದರ ಬದಿಯಲ್ಲಿರುವ ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಗಣೇಶನ ಚಿತ್ರಗಳ ಗೂಗಲ್ ಲಿಂಕ್ ಪರದೆಯ ಮೇಲೆ ತೆರೆಯುತ್ತದೆ.

ಅದರ ಮೇಲೆ ನಮೂದಿಸಲಾದ ವಿಳಾಸವು ಶ್ರೀ ಗಣೇಶ್ S/o ಮಹದೇವ್, ಕೈಲಾಶ್ ಪರ್ವತ, ಮೇಲಿನ ಮಹಡಿ, ಹತ್ತಿರ, ಮಾನಸರೋವರ, ಕೈಲಾಸ. ಇದರ ಜೊತೆಗೆ ಪಿನ್‌ಕೋಡ್- 000001 ಮತ್ತು ಹುಟ್ಟಿದ ವರ್ಷ 01/01/600CE(6ನೇ ಶತಮಾನ) ವನ್ನು ನಮೂದಿಸಲಾಗಿದೆ.

ಈ ಗಣೇಶ್ ಪಂಡಲ್‌ನ ಆಯೋಜಕ ಸರವ್ ಕುಮಾರ್ ಮಾತನಾಡಿ, ಕೋಲ್ಕತ್ತಾಗೆ ಭೇಟಿ ನೀಡಿದಾಗ ಫೇಸ್‌ಬುಕ್ ಥೀಮ್ ಪೆಂಡಾಲ್‌ ನೋಡಿದ್ದೆ. ಹೀಗಾಗಿ ಆಧಾರ್‌ ಕಾರ್ಡ್‌ ರೀತಿ ತಯಾರಿಸುವ ಆಲೋಚನೆ ನನಗೆ ಬಂದಿತು ಎಂದಿದ್ದಾರೆ.

BREAKING NEWS : ಲಾಲ್‌ಬಾಗ್‌ನಲ್ಲೂ ಕೆಂಪೇಗೌಡರ ಪ್ರತಿಮೆ ನಿರ್ಮಿಸುತ್ತೇವೆ : ಸಿಎಂ ಬೊಮ್ಮಾಯಿ ಘೋಷಣೆ

BIGG NEWS: ಹುಬ್ಬಳ್ಳಿಯ ಈದ್ಗಾ ಮೈದಾನದಿಂದ ʼಸಾವರ್ಕರ್ʼ ಪೋಸ್ಟರ್ ಇರುವ ಬ್ಯಾನರ್ ತೆರವು

BREAKING NEWS : ಮಹದೇವಪುರದಲ್ಲಿ `ಧರ್ಮಸ್ಥಳ ನಿಸರ್ಗ ಚಿಕಿತ್ಸೆ, ಯೋಗ ಶಿಕ್ಷಣ ಸಂಸ್ಥೆ’ ಉದ್ಘಾಟಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್

Share.
Exit mobile version