ಬೆಂಗಳೂರು : ಇಂದು ಉತ್ತರ ಪ್ರದೇಶ ಸಿಎಂ ಯೋಗಿಆದಿತ್ಯನಾಥ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದು,ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಹಾದೇವಪುರದಲ್ಲಿ ನಿರ್ಮಿಸಿರುವ ಶ್ರೀ ಧರ್ಮಸ್ಥಳ ನಿಸರ್ಗ ಚಿಕಿತ್ಸೆ ಹಾಗೂ ಯೋಗ ಶಿಕ್ಷಣ ಸಂಸ್ಥೆಯನ್ನು ಉದ್ಘಾಟಿಸಿದ್ದಾರೆ.

BIGG NEWS : ಬೆಂಗಳೂರಿಗೆ ಆಗಮಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್ : ನಗರದಲ್ಲಿ ಭಾರೀ ಕಟ್ಟೆಚ್ಚರ

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬೆಳಿಗ್ಗೆ 11:30ಕ್ಕೆ ಆಗಮಿಸಿದ್ದು,, ಬಳಿಕ ಹೆಲಿಕಾಪ್ಟರ್​ ಮೂಲಕ ನೆಲಮಂಗಲದಲ್ಲಿರುವ ಎಸ್​ಡಿಎಂ ನಿಸರ್ಗ ಕೇಂದ್ರದಲ್ಲಿ ರೀ ಧರ್ಮಸ್ಥಳ ನಿಸರ್ಗ ಚಿಕಿತ್ಸೆ ಹಾಗೂ ಯೋಗ ಶಿಕ್ಷಣ ಸಂಸ್ಥೆಯನ್ನು ಉದ್ಘಾಟಿಸಿದ್ದಾರೆ.

ಈ ವೇಳೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಹ ಉಪಸ್ಥಿತರಿರಲಿದ್ದಾರೆ.

Share.
Exit mobile version