ಮಡಿಕೇರಿ : ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ನವದೆಹಲಿ ಅವರು ಪ್ರಧಾನಮಂತ್ರಿ ಜನಜಾತಿಯ ಆದಿವಾಸಿ ನ್ಯಾಯ ಮಹಾ ಯೋಜನೆಯಡಿ(ಪಿಎಂ-ಜನ್ಮನ್) ಕಾರ್ಯಕ್ರಮಗಳನ್ನು ಪಿವಿಟಿಜಿ ಸಮುದಾಯವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನ ಪಡೆಯಲು ದೇಶದಾದ್ಯಂತ ಪಿಎಂ-ಜನ್ಮನ್ ಪೇಸ್ 2 (PMJANMAN Phase-II) ಕಾರ್ಯಕ್ರಮದಡಿ ಅರಿವು ಮೂಡಿಸುವ ಶಿಬಿರ/ಫಲಾನುಭವಿಗಳ ಸ್ಯಾಚುರೇಷನ್ ಕ್ಯಾಂಪ್ಗಳನ್ನು ಸೆಪ್ಟೆಂಬರ್, 10 ರವರೆಗೆ ವಿಸ್ತರಿಸಲಾಗಿದೆ.
ಕೊಡಗು ಜಿಲ್ಲೆಯ ಬುಡಕಟ್ಟು ಸಮುದಾಯವಾದ ಜೇನುಕುರುಬ ಸಮುದಾಯದವರಿಗೆ ಪಿಎಂ-ಜನ್ಮನ್ ಪೇಸ್ 2 (PM-JANMAN phase II) ರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು/ ಬ್ಲಾಕ್ ನೋಡೆಲ್ ಅಧಿಕಾರಿಗಳ ತಂಡ ರಚಿಸಲಾಗಿದೆ.
ಆಗಸ್ಟ್, 23 ರಿಂದ ಸೆಪ್ಟೆಂಬರ್, 10 ರ ಅವಧಿಯಲ್ಲಿ ಜೇನುಕುರುಬ ಜನಾಂಗದವರಿಗೆ ಆಧಾರ್ ಕಾರ್ಡ್ ನೋಂದಣಿ, ಪಿ.ಎಂ ಜನ್ಧನ್ ಬ್ಯಾಂಕ್ ಖಾತೆ, ಆಯುಷ್ಮಾನ್ ಭಾರತ್ ಕಾರ್ಡ್, ಸಿಕೆಲ್ಸೆಲ್ ಅನೆಮಿಯಾ ಖಾಯಿಲೆ ಸ್ಕ್ರೀನಿಂಗ್ ಪರೀಕ್ಷೆ, ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜೇನುಕುರುಬ ಜನಾಂಗದವರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವುದು.
ಹೆಚ್ಚಿನ ಮಾಹಿತಿಗೆ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ ಇವರ ಕಚೇರಿ ದೂರವಾಣಿ ಸಂಖ್ಯೆ 08272-200500, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ವಿರಾಜಪೇಟೆ ತಾಲ್ಲೂಕು (9901482763) ಹಾಗೂ ಸಹಾಯಕ ನಿರ್ದೇಶಕರು(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ತಾಲ್ಲೂಕು (7259552655) ರವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್: ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ
BREAKING : `CM ಸಿದ್ದರಾಮಯ್ಯ’ ಯಾವ ಕ್ಷಣದಲ್ಲಾದರೂ ರಾಜೀನಾಮೆ ನೀಡಬಹುದು : ಬಿ.ವೈ ವಿಜಯೇಂದ್ರ
ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ : ಈ ಯೋಜನೆಯಡಿ ಪ್ರತಿ ವರ್ಷ ಸಿಗಲಿದೆ 72,000 ರೂ. ಪಿಂಚಣಿ!