ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಮೆಟ್ರೋ ಮೂರನೇ ಹಂತಕ್ಕೆ, ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ತೆರಳುತ್ತಿದ್ದ ವೇಳೆ ಯುವಕನೊಬ್ಬ ಬ್ಯಾರಿಕೇಡ್ ಜಂಪ್ ಮಾಡಿ ತೆರಳಿದಂತ ಘಟನೆ ನಡೆದಿದೆ.
ಬೆಂಗಳೂರಿನ ಸೌಂತ್ ಎಂಡ್ ಸರ್ಕಲ್ ಬಳಿಯಲ್ಲಿ ಬ್ಯಾರಿಕೇಡ್ ಜಂಪ್ ಮಾಡಲು ಯುವಕ ಯತ್ನಿಸಿದ್ದಾನೆ. ಇದನ್ನು ಗಮನಿಸಿದಂತ ಸ್ಥಳದಲ್ಲಿದ್ದಂತ ಪೊಲೀಸರು, ಆತನನ್ನು ತಡೆದಿದ್ದಾರೆ. ಆ ವೇಳೆಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಆ ಸ್ಥಳದಿಂದ ತೆರಳಿದ್ದಾರೆ. ಯುವಕ ದಿಢೀರ್ ಪ್ರಧಾನಿ ಮೋದಿ ಆಗಮನದ ವೇಳೆಯಲ್ಲಿ ಬ್ಯಾರಿಕೇಡ್ ಹಾರಿ, ರಸ್ತೆಗೆ ತೆರಳೋದಕ್ಕೆ ಯತ್ನಿಸಿದ್ದರಿಂದ ಕೆಲ ಕಾಲ ಆತಂಕಕ್ಕೂ ಸ್ಥಳದಲ್ಲಿ ಕಾರಣವಾಗಿತ್ತು.
BREAKING: ಮೋದಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಪ್ಲ್ಯಾನ್ ಮಾಡಿದ್ದ NSUI ಮುಖಂಡರಿಗೆ ಪೊಲೀಸರಿಂದ ಗೃಹ ಬಂಧನ
ನಿಮಗೆ ಸಿಗುತ್ತೆ ‘300 ಯೂನಿಟ್’ವರೆಗೆ ‘ಉಚಿತ ವಿದ್ಯುತ್’: ʻಪಿಎಂ ಸೂರ್ಯ ಘರ್ ಯೋಜನೆʼಗೆ ಈ ರೀತಿ ಅರ್ಜಿ ಸಲ್ಲಿಸಿ