ಆ ಹಾಡಿನ ಮೂಲಕ ರಾತ್ರೋ ರಾತ್ರಿ ಫೇಮಸ್ ಆದಂತ ಆ ಹುಡುಗಿಯ ಇನ್ಸ್ಟಾ ಗ್ರಾಂ ಫಾಲೋವರ್ಸ್ ಸಂಖ್ಯೆಯೂ ಅಷ್ಟೇ ವೇಗವಾಗಿ ಏರಿಕೆಯಾಗಿದೆ. 150 ಮಂದಿ ಫಾಲೋವರ್ಸ್ ಹೊಂದಿದ ಆ ಯುವತಿ, ಇಂದು 40,000 ಫಾಲೋವರ್ಸ್ ಹೊಂದಿದ್ದಾಳೆ. ಆ ಬಗ್ಗೆ ಮುಂದೆ ಓದಿ.
ಸೋಷಿಯಲ್ ಮೀಡಿಯಾವೇ ಹಾಗೆ ಜನಸಾಮಾನ್ಯರನ್ನು ರಾತ್ರಿ ಕಳೆದು ಬೆಳಗಾಗುವ ಅಷ್ಟರಲ್ಲಿ ಫೇಮಸ್ ಮಾಡಿ ಬಿಡುತ್ತದೆ. ಕೆಲವರು ರೀಲ್ಸ್ ಮಾಡಿ ಫೇಮಸ್ ಆದ್ರೇ, ಮತ್ತೆ ಕೆಲವರು ತಾರಾವರಿ ವೀಡಿಯೋ ಮಾಡಿ ಪ್ರಸಿದ್ಧಿ ಗಳಿಸಿದ್ದಾರೆ. ಫೇಮಸ್ ಆಗೋದಕ್ಕೆ ಸಾಮಾಜಿಕ ಮಾಧ್ಯಮಗಳು ವೇದಿಕೆಯನ್ನು ಕಲ್ಪಿಸಿವೆ.
ಕಳೆದ ಮೂರು ನಾಲ್ಕು ದಿನಗಳ ಹಿಂದೆ ಹೀಗೆ ಫೇಮಸ್ ಆದಂತ ಯುವತಿಯೇ ನಿತ್ಯಾಶ್ರೀ. ಈಕೆ ಹೂವಿನ ಬಾಣದಂತೆ ಹಾಡಿದಂತ ಹಾಡಿನ ಮೂಲಕ ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಹೂವಿನ ಬಾಣದಂತೆ ಹಾಡಿನ ಮೂಲಕ ಫೇಮಸ್ ಆಗಿ ಬಿಟ್ಟಿದ್ದಾಳೆ. ಸ್ನೇಹಿತರ ಗುಂಪಿನಲ್ಲಿ ತಮಾಷೆಗೆಂದು ಹಾಡಿದ ಹೂವಿನ ಬಾಣದಂತೆ ಹಾಡು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿತ್ಯಾಶ್ರೀ ಹಾಡಿದಂತ ಹೂವಿನ ಬಾಣದಂತೆ ಹಾಡಿನಿಂದಾಗಿ ಇನ್ಸ್ಟಾ ಗ್ರಾಂನಲ್ಲಿ 150 ಮಂದಿ ಫಾಲೋವರ್ಸ್ ಹೊಂದಿದ್ದ ಈಕೆ, ಇದೀಗ 40 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಅಂದಹಾಗೇ ನಿತ್ಯಾಶ್ರೀ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಮೊಸಳೆಕೊಪ್ಪ ಗ್ರಾಮದವರು. ಪದವಿ ಶಿಕ್ಷಣ ಪಡೆಯಲು ಮೈಸೂರಿನಲ್ಲಿ ನೆಲೆಸಿದ್ದಾರೆ.
ನಿಮ್ಮ ಆಧಾರ್ ಕಾರ್ಡ್ ಅನ್ನು WhatsAppನಲ್ಲಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ