ಕಲಬುರ್ಗಿ: ಜಿಲ್ಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬರ ಪೋಟೋವನ್ನು ಅಶ್ಲೀಲವಾಗಿ ಸಂದೇಶ ಪೋಸ್ಟ್ ಮಾಡಿ ವೈರಲ್ ಮಾಡಲಾಗಿತ್ತು. ಈ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕುರಿಕೋಟ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕಮಲಾಪುರ ತಾಲ್ಲೂಕಿನ ಭೂಸಣಗಿ ಗ್ರಾಮದ ಸಾಕ್ಷಿ ಉಪ್ಪಾರ್ (22) ಎಂಬ ಯುವತಿಯೇ ಆತ್ಮಹತ್ಯೆಗೆ ಶರಣಾದಂತವರಾಗಿದ್ದಾರೆ.
ಮೃತ ಯುವತಿ ಸಾಕ್ಷಿ ಉಪ್ಪಾರ್ ಗೆ ಅಭಿಷೇಕ್ ಎಂಬಾತ ಕಿರುಕುಳ ನೀಡುತ್ತಿದ್ದನು. ಯುವತಿಯ ಜೊತೆಗಿರುವಂತ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದನು. ಈ ಪೋಟೋಗಳು ವೈರಲ್ ಆಗಿದ್ದವು.
ಅಭಿಷೇಕ್ ನೀಡುತ್ತಿದ್ದಂತ ಕಿರುಕುಳ ಹಾಗೂ ತನ್ನ ಖಾಸಗಿ ಪೋಟೋಗಳು ವೈರಲ್ ಆಗಿದ್ದರಿಂದಾಗಿ ಮನನೊಂದು ಯುವತಿ ಸಾಕ್ಷಿ ಉಪ್ಪಾರ್ ಬೆಣ್ಣೆತೋರಾ ಡ್ಯಾಂಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯದಲ್ಲಿ 15,000 ಲಂಚ ಪಡೆಯುತ್ತಿದ್ದಾಗಲೇ ಮೂವರು ನೌಕರರು ಲೋಕಾಯುಕ್ತ ಬಲೆಗೆ
BREAKING: ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸುಪಾರಿ ಪಡೆದಿದ್ದ ನಾಲ್ವರು ಅರೆಸ್ಟ್