ಬಳ್ಳಾರಿ: ಜಿಲ್ಲೆಯಲ್ಲಿ ಪುಂಡರ ಗುಂಪಿನಿಂದ ಯುವಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿರುವಂತ ಘಟನೆ ನಡೆದಿದೆ. ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದೇ ಕ್ರೂರಿಗಳು ಥಳಿಸಿದ್ದಾರೆ.
ಬಳ್ಳಾರಿ ನಗರದ ಟಿಐಐ ಕಾಲೇಜು ಗ್ರೌಂಡ್ ನಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತೆ ಜೊತೆಗಿನ ಪೋಟೋಗಳನ್ನು ಯುವಕ ಸ್ಟೇಟಸ್ ಹಾಕಿದ್ದನು. ಈ ಕಾರಣದಿಂದ ಪುಂಡರ ಗುಂಪಿನಿಂದ ಯುವಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ.
ಅಪ್ರಾಪ್ತೆಯ ಜೊತೆಗೆ ಸಮಾರಂಭವೊಂದರಲ್ಲಿ ತೆಗೆಸಿದ್ದಂತ ಪೋಟೋಗಳನ್ನು ಯುವಕ ದೊಡ್ಡಬಸವ ವಾಟ್ಸ್ ಆಪ್ ಸ್ಟೇಟಸ್ ಹಾಕಿದ್ದಕ್ಕೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಬಾಯಲ್ಲಿ ಕರ್ತ ಬರುವಂತೆ ಬ್ಯಾಟ್, ಬೆಲ್ಟ್ ನಿಂದ ಶಶಿ, ಸಾಯಿಕುಮಾರ್ ಸೇರಿದಂತೆ 10 ಜನರಿಂದ ಹಲ್ಲೆ ಮಾಡಲಾಗಿದೆ.
ಶಶಿ, ಸಾಯಿಕುಮಾರ್ ಸೇರಿದಂತೆ 10 ಜನರು ಮಾಡಿದಂತ ಹಲ್ಲೆಯಿಂದಾಗಿ ದೊಡ್ಡಬಸವನಿಗೆ ತುಟಿ, ದವಡೆ, ಬೆನ್ನು, ಎದೆ, ಪಕ್ಕೆಲುಬು, ಸೊಂಟಕ್ಕೆ ಗಾಯವಾಗಿದೆ. ಈ ಸಂಬಂಧ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಹುಲ್ ಗಾಂಧಿಗೆ MLC ಛಲವಾದಿ ನಾರಾಯಣಸ್ವಾಮಿ ಪತ್ರ: ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿಯೆಂದು ಆಗ್ರಹ
‘ಮತಗಳ್ಳತನ’ದ ದಾಖಲೆ ಇದ್ದರೆ ಕಾಂಗ್ರೆಸ್ ಬಿಡುಗಡೆ ಮಾಡಲಿ: ಬೊಮ್ಮಾಯಿ ಸವಾಲ್