ಚಿತ್ರದುರ್ಗ : ಚಿತ್ರದುರ್ಗದಲ್ಲಿ ಏಕಕಾಲಕ್ಕೆ ಇಬ್ಬರು ಯುವತಿಯರನ್ನು ಮದುವೆಯಾಗಿರುವ ಘಟನೆ ನಡೆದಿದ್ದು, ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಚಿತ್ರದುರ್ಗದ ಎಂ.ಕೆ. ಪ್ಯಾಲೇಸ್ ನಲ್ಲಿ ಯುವಕನೊಬ್ಬ ಏಕಕಾಲಕ್ಕೆ ಇಬ್ಬರು ಯುವತಿರನ್ನು ಮದುವೆಯಾಗಿರುವ ಘಟನೆ ನಡೆದಿದೆ. ವಸೀಮ್ ಶೇಖ್ ಜೊತೆಗೆ ಶಿಫಾ ಮತ್ತು ಜನ್ನತ್ ಅವರು ಮದುವೆಯಾಗಿದ್ದಾರೆ.
ವಸೀಮ್ ಶೇಕ್ ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ವಸೀಮ್ ಗೆ ಇಬ್ಬರು ಯುವತಿಯರ ಪರಿಚಯವಾಗುತ್ತದೆ. ಇಬ್ಬರು ಯುವತಿಯರ ಜೊತೆಗೆ ವಸೀಮ್ ಗೆ ಪ್ರೇಮಾಂಕುರವಾಗಿತ್ತು. ಹೀಗಾಗಿ ಇಬ್ಬರನ್ನು ಏಕಕಾಲಕ್ಕೆ ಮದುವೆ ಆಗಿದ್ದಾನೆ. ಸದ್ಯ ಈ ಮದುವೆಯ ಫೋಟೋ, ವಿಡಿಯೋ ವೈರಲ್ ಆಗುತ್ತಿವೆ.