ಬೆಂಗಳೂರು: ನಗರದಲ್ಲಿ ಮ್ಯಾನ್ ಹೋಲ್ ಸ್ವಚ್ಛಗೊಳಿಸೋದಕ್ಕೆ ಇಳಿದಿದ್ದಂತ ಓರ್ವ ಕಾರ್ಮಿಕ ಉಸಿರುಗಟ್ಟಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ಆಶ್ರಯನಗರದ ನಿವಾಸಿ ಪುಟ್ಟಸ್ವಾಮಿ ಸಾವನ್ನಪ್ಪಿದ್ದಾರೆ. ಹಣದ ಆಮಿಷ ತೋರಿಸಿ ಪುಟ್ಟಸ್ವಾಮಿಯನ್ನು ಮ್ಯಾನ್ ಹೋಲ್ ಕ್ಲೀನ್ ಮಾಡಿಸೋದಕ್ಕೆ ಇಳಿಸಿರುವಂತ ಶಂಕೆ ವ್ಯಕ್ತವಾಗಿದೆ.
ಆಂಥೋನಿ ಜೊತೆಗೆ ಮ್ಯಾನ್ ಹೋಲ್ ಸ್ವಚ್ಛಗೊಳಿಸೋದಕ್ಕೆ ಪುಟ್ಟಸ್ವಾಮಿ ಇಳಿದಿದ್ದರು. ಒಳಚರಂಡಿಗೆ ಇಳಿದು ಸುಮಾರು ಒಂದು ಗಂಟೆ ಕೆಲಸ ಮಾಡಿದ್ದರು. ಈ ವೇಳೆ ಉಸಿರುಗಟ್ಟಿದಂತೆ ಆಗಿ ಆಂಥೋನಿ, ಪುಟ್ಟಸ್ವಾಮಿ ಮೇಲೆ ಬಂದಿದ್ದರು.
ಆಸ್ಪತ್ರೆಗೆ ದಾಖಲಾಗೆ ದಾಖಲಾಗದೇ ಮನೆಗೆ ತೆರಳಿದ್ದಂತ ಪುಟ್ಟಸ್ವಾಮಿ ಸಾವನ್ನಪ್ಪಿದ್ದಾರೆ. ಅಸ್ವಸ್ಥಗೊಂಡಿರುವಂತ ಆಂಥೋನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಯಶವಂತಪುರದ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.