ಕಲಬುರ್ಗಿ: ಜಿಲ್ಲೆಯ ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಹೆಚ್ಚು ಜನರು ಸೇರಿದ್ದರಿಂದ ಕಾಲ್ತುಳಿತ ಉಂಟಾಗಿ ಓರ್ವ ಮಹಿಳೆ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ಅಲ್ಲದೇ ಕಾಲ್ತುಳಿತದಲ್ಲಿ ಹಲವು ಭಕ್ತರು ಗಾಯಗೊಂಡಿದ್ದಾರೆ.
ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗಾಣಗಾಪುರದ ದತ್ತನ ಸನ್ನಿಧಿಗೆ ಗುರು ಪೂರ್ಣಿಮೆಯ ಪ್ರಯುಕ್ತ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಗಳಿಂದ ಹೆಚ್ಚು ಭಕ್ತರು ಇಂದು ಆಗಮಿಸಿದ್ದರು. ಗುರು ಪೂರ್ಣಿಮೆಯ ಪ್ರಯುಕ್ತ ದೇವರ ದರ್ಶನಕ್ಕೆ ಬಂದ ವೇಳೆಯಲ್ಲಿ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಗಾಣಗಾಪುರ ದತ್ತನ ಸನ್ನಿಧಿಯ ದೇವಸ್ಥಾನದಲ್ಲಿ ನೂಕು ನುಗ್ಗಲು ಉಂಟಾಗಿ ಕಲಾವತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ಮೂಲದ ಕಲಾವತಿ(50) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡವನ್ನು ಕಲಿತು ನಲಿಯಿರಿ, ಇಂಗ್ಲೀಷನ್ನು ವ್ಯವಹಾರಿಕ ಭಾಷೆಯಾಗಿ ಕಲಿಯಿರಿ: ವಕೀಲ ಹೆಚ್.ಬಿ ರಾಘವೇಂದ್ರ
GOOD NEWS: ‘ನರ್ಸಿಂಗ್ ಕೋರ್ಸ್’ ಶುಲ್ಕ ಹೆಚ್ಚಳದ ಆತಂಕದಲ್ಲಿದ್ದವರಿಗೆ ‘ಸಚಿವ ಶರಣಪ್ರಕಾಶ್ ಪಾಟೀಲ್’ ಗುಡ್ ನ್ಯೂಸ್