Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮಿತಿಮೀರಿದ ಬಿಸಿಲಲ್ಲಿದ್ದರೆ `ಪಾರ್ಶ್ವವಾಯು’ ಬರಬಹುದು ಎಚ್ಚರ !

19/03/2026 9:00 AM

​’ರಾಜಕಾರಣದಲ್ಲಿ ಪೂರ್ಣವಿರಾಮ ಎಂಬುದಿಲ್ಲ’: ರಾಜ್ಯಸಭಾ ಸದಸ್ಯರ ಬೀಳ್ಕೊಡುಗೆಯಲ್ಲಿ ಪ್ರಧಾನಿ ಮೋದಿ ಮಾರ್ಮಿಕ ನುಡಿ

19/03/2026 8:53 AM

ಇರಾನ್ ಅನಿಲ ಘಟಕಗಳ ಮೇಲೆ ಭೀಕರ ದಾಳಿ:’ಮಹಾ ಸಂಘರ್ಷಕ್ಕೆ ನಾಂದಿ’ ಎಂದು ಕತಾರ್ ಗಂಭೀರ ಎಚ್ಚರಿಕೆ!

19/03/2026 8:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಲಜೀವನ ಯೋಜನೆ ಅನುಷ್ಠಾನ ಲೋಪ ತನಿಖೆಗೆ ತಂಡ ರಚನೆ: ಸಚಿವ ಕೃಷ್ಣ ಬೈರೇಗೌಡ
KARNATAKA

ಜಲಜೀವನ ಯೋಜನೆ ಅನುಷ್ಠಾನ ಲೋಪ ತನಿಖೆಗೆ ತಂಡ ರಚನೆ: ಸಚಿವ ಕೃಷ್ಣ ಬೈರೇಗೌಡ

By kannadanewsnow0914/03/2025 4:47 PM

ಬೆಂಗಳೂರು : ತುಮಕೂರು ಜಿಲ್ಲೆಯ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂವರು ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಗೆ ತಿಳಿಸಿದರು.

ಕಾಂಗ್ರೆಸ್ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರ ಗಮನ ಸೆಳೆಯುವ ಸೂಚನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪರವಾಗಿ ಉತ್ತರಿಸಿದ ಸಚಿವರು, ತನಿಖಾ ತಂಡವು ತುಮಕೂರಿಗೆ ಭೇಟಿ ನೀಡಿ 571 ಕಾಮಗಾರಿಗಳನ್ನು ಆಯ್ಕೆ ಮಾಡಿ, 183 ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿದೆ. 25 ಅನರ್ಹ ಗುತ್ತಿಗೆದಾರರಿಗೆ 69 ಕಾಮಗಾರಿಗಳ ಟೆಂಡ‌ರ್ ನೀಡಿ, ಕಾರ್ಯಪಾಲಕ ಇಂಜಿನಿಯರ್ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮಧ್ಯಂತರ ವರದಿ ನೀಡಿದೆ.

ಕರ್ತವ್ಯಲೋಪ ಎಸಗಿದ ಕಾರ್ಯಪಾಲಕ ಇಂಜಿನಿಯರ್ (ನಿವೃತ್ತ) ಎಸ್. ರವೀಶ್ ಅವರ ವಿರುದ್ಧ ಇಲಾಖಾ ವಿಚಾರಣೆ ಕೈಗೊಳ್ಳಲು ಮತ್ತು ದೋಷಾರೋಪಪಟ್ಟಿ ಸಲ್ಲಿಸಲು ಸರ್ಕಾರ ಅನುಮತಿ ನೀಡಿದೆ. ತನಿಖೆ ಅರ್ಧ ನಡೆಯುವುದರಿಂದ ಲೋಕಾಯುಕ್ತ ತನಿಖೆಗೆ ವಹಿಸಿದರೆ ವಿಳಂಬವಾಗುವುದು.

ಇದೇ ತನಿಖಾತಂಡವನ್ನು ಮುಂದುವರಿಸುವ ಮತ್ತು ಎಲ್ ಓಎ ಕೊಟ್ಟಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು, ಸಂಬಂಧಪಟ್ಟ ಶಾಸಕರೊಂದಿಗೆ ಚರ್ಚಿಸಲು ತಿಳಿಸಲಾಗುವುದು ಎಂದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಶಾಸಕ ಜಿ.ಟಿ.ಪಾಟೀಲ್ ಅವರು, ಈ ಸಂಬಂಧ ಅಂದಾಜು ಸಮಿತಿಯಲ್ಲಿ ಚರ್ಚೆಯಾಗಿದೆ. ಲೋಕಾಯುಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದರು. ಬಿಜೆಪಿ ಶಾಸಕ ಸಿದ್ದು ಸವದಿ ಮಾತನಾಡಿ, ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆ ಕಳಪೆಯಿಂದ ಕೂಡಿದ್ದು, ತನಿಖೆಆಗಬೇಕೆಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಟಿ.ಬಿ.ಜಯಚಂದ್ರ ಅವರು, ಜಲಜೀವನ್ ಮಿಷನ್ ಯೋಜನೆಯ 2528 ಕಾಮಗಾರಿಗಳಲ್ಲಿ ಅವ್ಯವಹಾರವಾಗಿದೆ. ರಸ್ತೆ ಕಾಮಗಾರಿ ಆಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿ ನಿವೃತ್ತರಾಗಿದ್ದಾರೆ. ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುತ್ತಿರುವವರಿಗೆ ತಕ್ಕ ಶಾಸ್ತಿಯಾಗಲು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

BREAKING NEWS: ಪೊಲೀಸ್ ಸಮವಸ್ತ್ರದಲ್ಲೇ ಸ್ವಾಮೀಜಿ ಕಾಲಿಗೆ ಬಿದ್ದ ಪ್ರಕರಣ: 6 ಮಂದಿಗೆ ವರ್ಗಾವಣೆ ಶಿಕ್ಷೆ

BIG NEWS: ಬೆಂಗಳೂರಲ್ಲಿ ನೀರಿನ ದರ 1 ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

Share. Facebook Twitter LinkedIn WhatsApp Email

Related Posts

ALERT : ಮಿತಿಮೀರಿದ ಬಿಸಿಲಲ್ಲಿದ್ದರೆ `ಪಾರ್ಶ್ವವಾಯು’ ಬರಬಹುದು ಎಚ್ಚರ !

19/03/2026 9:00 AM1 Min Read

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

19/03/2026 8:47 AM2 Mins Read

ALERT : ಸರಿಯಾದ ನಿದ್ರೆಯಿಲ್ಲದಿದ್ದರೆ ಕಾಡಲಿವೆ ಗಂಭೀರ ಆರೋಗ್ಯ ಸಮಸ್ಯೆಗಳು!

19/03/2026 8:44 AM1 Min Read
Recent News

ALERT : ಮಿತಿಮೀರಿದ ಬಿಸಿಲಲ್ಲಿದ್ದರೆ `ಪಾರ್ಶ್ವವಾಯು’ ಬರಬಹುದು ಎಚ್ಚರ !

19/03/2026 9:00 AM

​’ರಾಜಕಾರಣದಲ್ಲಿ ಪೂರ್ಣವಿರಾಮ ಎಂಬುದಿಲ್ಲ’: ರಾಜ್ಯಸಭಾ ಸದಸ್ಯರ ಬೀಳ್ಕೊಡುಗೆಯಲ್ಲಿ ಪ್ರಧಾನಿ ಮೋದಿ ಮಾರ್ಮಿಕ ನುಡಿ

19/03/2026 8:53 AM

ಇರಾನ್ ಅನಿಲ ಘಟಕಗಳ ಮೇಲೆ ಭೀಕರ ದಾಳಿ:’ಮಹಾ ಸಂಘರ್ಷಕ್ಕೆ ನಾಂದಿ’ ಎಂದು ಕತಾರ್ ಗಂಭೀರ ಎಚ್ಚರಿಕೆ!

19/03/2026 8:47 AM

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

19/03/2026 8:47 AM
State News
KARNATAKA

ALERT : ಮಿತಿಮೀರಿದ ಬಿಸಿಲಲ್ಲಿದ್ದರೆ `ಪಾರ್ಶ್ವವಾಯು’ ಬರಬಹುದು ಎಚ್ಚರ !

By kannadanewsnow5719/03/2026 9:00 AM KARNATAKA 1 Min Read

ಬೇಸಿಗೆಯ ಬಿಸಿಲು ಕೇವಲ ಬೆವರು ಅಥವಾ ಆಯಾಸಕ್ಕೆ ಸೀಮಿತವಾಗಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ತೀವ್ರವಾದ ಬಿಸಿಗಾಳಿ (Heatwave) ಮತ್ತು ಏರುತ್ತಿರುವ…

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

19/03/2026 8:47 AM

ALERT : ಸರಿಯಾದ ನಿದ್ರೆಯಿಲ್ಲದಿದ್ದರೆ ಕಾಡಲಿವೆ ಗಂಭೀರ ಆರೋಗ್ಯ ಸಮಸ್ಯೆಗಳು!

19/03/2026 8:44 AM

ALERT : ಸಾರ್ವಜನಿಕರೇ ಗಮನಿಸಿ : ಗುಡುಗು, ಸಿಡಿಲಿನಿಂದ ಪಾರಾಗಲು ತಪ್ಪದೇ ಈ ಸಲಹೆಗಳನ್ನು ಪಾಲಿಸಿ !

19/03/2026 8:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.