ಬೆಂಗಳೂರು: ನಗರದಲ್ಲಿ ಉಗ್ರರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಂತ ಶಂಕಿತ ಮಹಿಳೆಯೊಬ್ಬರನ್ನು ಗುಜರಾತ್ ಎಟಿಎಸ್ ಹಾಗೂ ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಭಯೋತ್ಪಾದಕರ ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದ ಬಂಧಿತ ಮಹಿಳೆಯನ್ನು ಪರ್ವಿನ್ ಎಂಬುದಾಗಿ ಗುರುತಿಸಲಾಗಿದೆ. ಬೆಂಗಳೂರಿನ ಹೆಬ್ಬಾಳದ ಮನೋರಮಾ ಪಾಳ್ಯದಲ್ಲಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಮಹಿಳೆಯನ್ನು ಅರೆಸ್ಟ್ ಮಾಡಿದ್ದಾರೆ.
ಅಂದಹಾಗೆ ಬಂಧಿತ ಶಂಕಿತ ಮಹಿಳೆ ಪರ್ವಿನ್ ಇನ್ ಸ್ಟಾಗ್ರಾಂ ಮೂಲಕ ಶಂಕಿತ ಉಗ್ರರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರಂತೆ. ಮೆಸೇಜ್, ಕರೆ ಮೂಲಕ ಮಾತನಾಡುತ್ತಿದ್ದ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಈ ಬಗ್ಗೆ ದೀರ್ಘಕಾಲದಿಂದ ಟ್ರ್ಯಾಕ್ ಮಾಡಿ ಬಂಧಿಸಿದ್ದಾರೆ.
ಸದ್ಯ ಬಂಧಿತ ಶಂಕಿತ ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆ ಬಳಿಕ ಕೋರ್ಟ್ ಗೆ ಹಾಜರುಪಡಿಸೋದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ವ್ಯಾಯಾಮದ ಜೊತೆಗೆ MIND ಆಹಾರಕ್ರಮವು ಬುದ್ಧಿಮಾಂದ್ಯತೆಯ ಅಪಾಯ ಕಡಿಮೆ ಮಾಡುತ್ತದೆ: ಯುಎಸ್ ಅಧ್ಯಯನ