ಸ್ಪೇನ್ : ಸೋಮವಾರ ಮುಂಜಾನೆ ದಕ್ಷಿಣ ಸ್ಪೇನ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಪ್ರದೇಶದಲ್ಲಿ ಹಠಾತ್ ಪ್ರವಾಹ ಮತ್ತು ಭಾರೀ ಮಳೆಯಿಂದ ಹಾನಿಗೊಳಗಾದ ಕೆಲವೇ ಗಂಟೆಗಳ ನಂತರ ಪ್ರಬಲ ಭೂಕಂಪನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.
ಇಂಡಿಪೆಂಡೆಂಟ್ ವರದಿಯ ಪ್ರಕಾರ, ಭೂಕಂಪನದ ಪರಿಣಾಮವಾಗಿ ಪೀಡಿತ ವಲಯದಲ್ಲಿರುವ ವಿಮಾನ ನಿಲ್ದಾಣದ ಮೇಲ್ಛಾವಣಿ ಭಾಗಶಃ ಕುಸಿದಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ತುರ್ತು ಸೇವೆಗಳು ಈ ಪ್ರದೇಶದಲ್ಲಿನ ಹಾನಿಯನ್ನು ನಿರ್ಣಯಿಸುತ್ತಿವೆ.
ಸ್ಪೇನ್‌ನ ನ್ಯಾಷನಲ್ ಜಿಯಾಗ್ರಫಿಕ್ ಇನ್‌ಸ್ಟಿಟ್ಯೂಟ್ ಸ್ಥಳೀಯ ಸಮಯ ಬೆಳಿಗ್ಗೆ 7.13 ಕ್ಕೆ ಅಲ್ಮೇರಿಯಾ ಕರಾವಳಿಯ ಕ್ಯಾಬೊ ಡಿ ಗಾಟಾದಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ. ಕೋಸ್ಟಾ ಡೆಲ್ ಸೋಲ್ ಮತ್ತು ಅಲಿಕಾಂಟೆಯಂತಹ ಪ್ರವಾಸಿ ತಾಣಗಳಲ್ಲಿ ಕಂಪನದ ಅನುಭವವಾಯಿತು.
ಭೂಕಂಪದ ಉತ್ತುಂಗದಲ್ಲಿ, ಯುರೋಪಿಯನ್ ಮ್ಯಾಕ್ರೋಸೀಸ್ಮಿಕ್ ಮಾಪಕದಲ್ಲಿ IV-V ರೇಟಿಂಗ್ ಹೊಂದಿರುವ ಮಧ್ಯಮದಿಂದ ಬಲವಾದ ತೀವ್ರತೆಯನ್ನು ತಲುಪಿದೆ ಎಂದು ಇಂಡಿಪೆಂಡೆಂಟ್ ವರದಿ ತಿಳಿಸಿದೆ.