ಶಿವಮೊಗ್ಗ: ರಾಜ್ಯದಲ್ಲೊಂದು ವಿಚಿತ್ರ ಕೇಸ್ ಎನ್ನುವಂತೆ ಪಕ್ಕದ ಮನೆಯವರು ಸಾಕಿರುವಂತ ಕೋಳಿ ಕೂಗೋದರಿಂದ ನಿದ್ದೆ ಮಾಡೋದಕ್ಕೆ ಆಗುತ್ತಿಲ್ಲ. ನನ್ನ ನಿದ್ದೆಗೆ ತೊಂದರೆ ಆಗಿದೆ. ಕೋಳಿ ಸಾಗಿರುವಂತ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿರುವಂತ ಘಟನೆ ಸಾಗರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಲೋಹಿಯಾ ನಗರದ ಡೇನಿಯಲ್.ಎನ್ ಎಂಬಾತ ಪಕ್ಕದ ಮನೆಯಲ್ಲಿ ನಾಟಿ ಕೋಳಿ ಸಾಕಿರುವಂತ ಮಾಲೀಕನ ವಿರುದ್ಧ ಇಂತದ್ದೊಂದು ದೂರನ್ನು ಕೆ ಎಸ್ ಪಿ ಆಪ್ ಮೂಲಕ ಸಾಗರ ಟೌನ್ ಪೊಲೀಸರಿಗೆ ಸಲ್ಲಿಸಿದ್ದಾರೆ.
ಸಾಗರದ ಲೋಹಿಯಾನಗರದ ನಿವಾಸಿ ಡೇನಿಯಲ್ ಸಲ್ಲಿಸಿರುವಂತ ದೂರಿನಲ್ಲಿ ವಸತಿ ಪ್ರದೇಶದಲ್ಲಿ ಪಕ್ಕದ ಮನೆಯ ಮಾಲೀಕರೊಬ್ಬರು ನಾಟಿ ಕೋಳಿಗಳನ್ನು ಸಾಕಿದ್ದಾರೆ. ಇದರಿಂದ ಶಬ್ದ ಮಾಲೀನ್ಯ ಉಂಟಾಗುತ್ತಿದೆ. ಶಬ್ದ ಮಾಲಿನ್ಯ ಮಾನದಂಡಗಳಂತೆ ವಸತಿ ಪ್ರದೇಶದಲ್ಲಿ ಹಗಲಿನಲ್ಲಿ 55 ಡಿಬಿ, ರಾತ್ರಿಯ ವೇಳೆಯಲ್ಲಿ 45 ಡಿಬಿ ಶಬ್ದವಿರಬೇಕು. ಅದಕ್ಕಿಂತ ಹೆಚ್ಚು ಇರಬಾರದು ಎಂದಿದೆ ಎಂದು ತಿಳಿಸಿದ್ದಾರೆ.
ಪಕ್ಕದ ಮನೆಯವರು ಸಾಕಿರುವಂತ ನಾಟಿ ಕೋಳಿಗಳಿಂದ ಒಂದೊಂದು ಕೋಳಿ ಕೂಗುವಾಗಲೂ 100 ರಿಂದ 140 ಡಿಬಿ ಶಬ್ದ ಬರುತ್ತಿದೆ. ಇದರಿಂದ ಪಕ್ಕದ ಮನೆಯಲ್ಲೇ ಇರುವಂತ ದಂಪತಿಗಳಾದಂತ ನಾವುಗಳು ವಾಸಿಸೋದಕ್ಕೆ ಸಾಧ್ಯವೇ? ನಾವು ಕೋಳಿ ಕೂಗಿನಿಂದ ನಲುಗಿ ಹೋಗಿದ್ದೇವೆ. ಅವುಗಳು ಕೂಗುವುದರಿಂದ ನಿದ್ರೆ ಮಾಡೋದಕ್ಕೂ ಆಗುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಾಗರದ ನನ್ನ ಮನೆಯ ಪಕ್ಕದ ಮನೆಯ ಮಾಲೀಕರು ನಾಟಿ ಕೋಳಿ ಸಾಕಿರುವುದರಿಂದ ಶಬ್ದ ಮಾಲೀನ್ಯ ಉಂಟಾಗಿದೆ. ಅವುಗಳ ಶಬ್ದದಿಂದ ನಲುಗಿ, ನಾನು ಬೆಂಗಳೂರಿಗೆ ಬಂದು ಕಾಲ ಕಳೆಯುವಂತೆ ಆಗಿದೆ. ದಯವಿಟ್ಟು ವಸತಿ ಪ್ರದೇಶದಿಂದ ಕೋಳಿಗಳನ್ನು ಬೇರೆಡೆಗೆ ಸಾಗಿಸಿ, ಸಾಕುವಂತೆ ಕಾನೂನು ಕ್ರಮವಹಿಸಲು ದೂರಿನಲ್ಲಿ ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಮಾನವೀಯತೆ ಮೆರೆದ ಜಡ್ಜ್: ವೃದ್ಧನ ಬಳಿ ತೆರಳಿ ತೀರ್ಪು, ಸ್ಥಳದಲ್ಲೇ ಪರಿಹಾರಕ್ಕೆ ಆದೇಶ