ಮೈಸೂರು: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ಯಶವಂತಪುರ ಮತ್ತು ತಾಳಗುಪ್ಪ ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಗಳನ್ನು ನಿರ್ವಹಿಸಲು ನಿರ್ಧರಿಸಲಾಗಿದೆ.
ರೈಲು ಸಂಖ್ಯೆ 06543 ಯಶವಂತಪುರ – ತಾಳಗುಪ್ಪ ವಿಶೇಷ ಎಕ್ಸ್ ಪ್ರೆಸ್ ರೈಲು ಆಗಸ್ಟ್ 14, 2025 ರಂದು (ಗುರುವಾರ) ರಾತ್ರಿ 10:30 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗಿನ ಜಾವ 04:15 ಗಂಟೆಗೆ ತಾಳಗುಪ್ ತಲುಪಲಿದೆ. ವಾಪಸಾತಿ ಪ್ರಯಾಣದಲ್ಲಿ, ರೈಲು ಸಂಖ್ಯೆ 06544 ತಾಳಗುಪ್ಪ – ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಆಗಸ್ಟ್ 15, 2025 ರಂದು (ಶುಕ್ರವಾರ) ಬೆಳಿಗ್ಗೆ 08:15 ಗಂಟೆಗೆ ತಾಳಗುಪ್ಪದಿಂದ ಹೊರಟು, ಅಂದೇ ಸಂಜೆ 04:50 ಗಂಟೆಗೆ ಯಶವಂತಪುರ ತಲುಪಲಿದೆ.
ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ.
ಈ ರೈಲು 1 ಎಸಿ ಫಸ್ಟ್ ಕ್ಲಾಸ್, 2 ಎಸಿ ಟು ಟೈರ್, 5 ಎಸಿ ತ್ರಿ ಟೈರ್, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್, 2 ಲಗೇಜ್-ಕಮ್-ಗಾರ್ಡ್ ವ್ಯಾನ್ (ಜನರೇಟರ್ ಕಾರ್ ಸಹಿತ) ಮತ್ತು 1 ಪ್ಯಾಂಟ್ರಿ ಕಾರ್ (ಬಂದ್ ಸ್ಥಿತಿಯಲ್ಲಿರುತ್ತದೆ) ಸೇರಿದಂತೆ ಒಟ್ಟು 22 ಬೋಗಿಗಳನ್ನು ಒಳಗೊಂಡಿರುತ್ತದೆ.
‘ನಟ ದರ್ಶನ್ ಫ್ಯಾನ್ಸ್’ ವಿರುದ್ಧ ‘ನಟಿ ರಮ್ಯಾ’ ಕಾನೂನು ಸಮರ: ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ | Actress Ramya