ಬೆಂಗಳೂರು: ರಾಜ್ಯ ಸರ್ಕಾರದಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವಂತ ಮೆಟ್ರಿಕ್ ಪೂರ್ ಮತ್ತು ಮೆಟ್ರಿಕ್ ನಂತ್ರದ ವಿದ್ಯಾರ್ಥಿನಿಲಯಗಳ ನಿಲಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಅದೇ ಇಂದು ರಾತ್ರಿ ವಿಶೇಷ ಭೋಜನಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ಈ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು, ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರು, ಜಿಲ್ಲಾ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರ್ಣಗೊಂಡು 51ನೇ ವರ್ಷಕ್ಕೆ ಪಾದಾರ್ಪಣೆಯಾಗುತ್ತಿರುವ ಪ್ರಯುಕ್ತ, ದಿನಾಂಕ 07-11-2024ರ ಇಂದು ರಾತ್ರಿ ಊಟಕ್ಕೆ ವಿಶೇಷ ಭೋಜನದ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ.
ಇಂದು ರಾತ್ರಿ ವಿಶೇಷ ಭೋಜನದಲ್ಲಿ ಏನಿರಲಿದೆ.?
ಇಂದು ರಾತ್ರಿ ಊಟದ ವೇಳೆಯಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತ್ರದ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳಿಗೆ ವಿಶೇಷ ಭೋಜನಾ ವ್ಯವಸ್ಥೆಯಡಿ ಮೈಸೂರು ಪಾಕ್, ಹೋಳಿಗೆ, ಫಲಾವು, ವಾಂಗಿಬಾತ್, ಚಪಾತಿ, ಬೀನ್ಸ್ ಪಲ್ಯ, ಕೋಸಂಬರಿ, ಹೋಳಿಗೆ ಸಾಂಬಾರ್, ಅನ್ನ, ಮಜ್ಜಿಗೆ, ಬಾಳೇಹಣ್ಣು ನೀಡಲಾಗುತ್ತಿದೆ.
ಇನ್ನೂ ಇಂದು ಆಯುಕ್ತಾಲಯದ ಎಲ್ಲಾ ಅಧಿಕಾರಿಗಳು ಮತ್ತು ಕಚೇರಿ ಮೇಲ್ವಿಚಾರಕರು ರಾಜ್ಯದ ಯಾವುದಾದರೂ ಒಂದು ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸದರಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆಯೂ ಸೂಚಿಸಿದ್ದಾರೆ.
ಇದಲ್ಲದೇ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಜಿಲ್ಲೆ, ತಾಲ್ಲೂಕು ವ್ಯಾಪ್ತಿಯ ಕನಿಷ್ಠ 5 ವಿದ್ಯಾರ್ಥಿನಿಲಯಗಳಿಗೆ ಕಡ್ಡಾಯವಾಗಿ ಭೇಟಿ ನೀಡುವುದು. ಯಾವುದಾದರೂ ಒಂದು ವಿದ್ಯಾರ್ಥಿನಿಲಯದಲ್ಲಿ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿವುದು ಹಾಗೂ ಕಾರ್ಯಕ್ರಮದ ಸಂಪೂರ್ಣ ಮೇಲುಸ್ತುವಾರಿಯನ್ನು ವಹಿಸುವಂತೆ ಸೂಚಿಸಿದ್ದಾರೆ.