ಬೆಂಗಳೂರು: ಮಹಿಳೆ ಮತ್ತು ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಸದಾ ಬದ್ಧವಾಗಿರುವ ಮೆಟ್ರೊಪೊಲಿಸ್ ಹೆಲ್ತ್ ಕೇರ್ ಲಿಮಿಟೆಡ್, ಭಾರತದ ಪ್ರಮುಖ ಡಯಾಗ್ನೋಸ್ಟಿಕ್ ಸೇವಾ ಪೂರೈಕೆದಾರ ಸಂಸ್ಥೆಯಾಗಿದ್ದು ಮಗುವಿನ ಆರೋಗ್ಯದ ಬಗ್ಗೆ ಅಗತ್ಯ ಜ್ಞಾನ ಮತ್ತು ಅರಿವನ್ನು ನೀಡಿ ದಂಪತಿಗಳನ್ನು ಸಬಲೀಕರಣಗೊಳಿಸುವ ಉದ್ದೇಶಕ್ಕೆ ಸಮರ್ಪಿತವಾಗಿದೆ.
140,528 ಗರ್ಭಿಣಿಯರನ್ನು ಒಳಗೊಂಡ ಮೂರು ವರ್ಷಗಳ ಸಮಗ್ರ ಅಧ್ಯಯನದಲ್ಲಿ (ಜನವರಿ 2021 ರಿಂದ ಡಿಸೆಂಬರ್ 2023) ಮೆಟ್ರೊಪೊಲಿಸ್, ಪ್ರಸವಪೂರ್ವ ಆರೈಕೆಯಲ್ಲಿನ ಪ್ರಮುಖ ಸಂಶೋಧನೆಗಳನ್ನು ’ಪ್ರೆಗಾಸ್ಕ್ರೀನ್ ರಿಫ್ಲೆಕ್ಸ್’ ಪರೀಕ್ಷೆಯ ಮೂಲಕ ಒಳಗೆ ಪ್ರವೇಶಿಸದ ಪ್ರಸವಪೂರ್ವ ಪರೀಕ್ಷೆ (ಎನ್ಐಪಿಟಿ) ಅಥವಾ ಕಾರ್ಯೋಟೈಪಿಂಗ್ ಜೊತೆ ಬಿಡುಗಡೆ ಮಾಡಿದೆ. ಈ ಅಧ್ಯಯನವು ಭ್ರೂಣದ ಅಸಹಜತೆಗಳನ್ನು ಪತ್ತೆಹಚ್ಚಲು ರಿಫ್ಲೆಕ್ಸ್ ಪರೀಕ್ಷೆಯ ಪರಿಣಾಮವನ್ನು ನಿರ್ಣಯಿಸುವ ಗುರಿಯನ್ನು ಹೊಂದಿದೆ.
ಅಧ್ಯಯನವು ಇವುಗಳನ್ನು ಬಹಿರಂಗಪಡಿಸಿದೆ
* 140,528 ಗರ್ಭಧಾರಣೆಗಳಲ್ಲಿ, 5,879 ರಲ್ಲಿ ಹೆಚ್ಚಿನ ಅಪಾಯಗಳಿವೆ ಎಂದು ಸಾಂಪ್ರದಾಯಿಕ ಆರಂಭಿಕ ತ್ರೈಮಾಸಿಕ ಸ್ಕ್ರೀನಿಂಗ್‌ಗಳ ಮೂಲಕ ಗುರುತಿಸಲಾಗಿದೆ.
* ಆದರೂ, ಎನ್ಐಪಿಟಿ ಯನ್ನು ಪ್ರೆಗಾಸ್ಕ್ರೀನ್ ರಿಫ್ಲೆಕ್ಸ್ ಪರೀಕ್ಷೆಯೊಂದಿಗೆ ಸಂಯೋಜಿಸುವ ಮೂಲಕ, ಬಂದ ಫಲಿತಾಂಶಗಳು ನಿಜಕ್ಕೂ ಅಪಾಯ ಹೆಚ್ಚಿರುವ ಪ್ರಕರಣಗಳನ್ನು ಗುರುತಿಸುವಲ್ಲಿ ಹೆಚ್ಚು ನಿಖರವಾಗಿವೆ.
* ಮೊದಲ ತ್ರೈಮಾಸಿಕದಲ್ಲಿ, ಆರಂಭದಲ್ಲಿ ನಡೆಸಿದ ಡ್ಯೂಯಲ್ ಮಾರ್ಕರ್ ಪರೀಕ್ಷೆ 2,416 ಪ್ರಕರಣಗಳಲ್ಲಿ ಅಪಾಯ ಹೆಚ್ಚಿದೆ ಎಂದು ಸೂಚಿಸಿದೆ. ಎನ್ಐಪಿಟಿ ರಿಫ್ಲೆಕ್ಸ್ ಪರೀಕ್ಷೆ ಮಾಡಿದ ಬಳಿಕ ಇವುಗಳಲ್ಲಿ 64 ಮಾತ್ರ ಹೆಚ್ಚು ಅಪಾಯಕಾರಿ ಎಂದು ವರ್ಗೀಕರಿಸಲ್ಪಟ್ಟಿವೆ. ಇದರಿಂದಾಗಿ 1,142 ಪ್ರಕರಣಗಳನ್ನು ಕಡಿಮೆ ಅಪಾಯ ಉಳ್ಳವೆಂದು ನಿಖರವಾಗಿ ಗುರುತಿಸಲಾಗಿದೆ.
* ಅಂತೆಯೇ, ಎರಡನೇ ತ್ರೈಮಾಸಿಕದಲ್ಲಿ, ಕ್ವಾಡ್ರುಪಲ್ ಮಾರ್ಕರ್‌ನಿಂದ ಗುರುತಿಸಿದ್ದ 3,463 ಪ್ರಕರಣಗಳಲ್ಲಿ, 455 ಪ್ರಕರಣಗಳನ್ನು ಕಡಿಮೆ ಅಪಾಯ ಉಳ್ಳವೆಂದು ಎನ್ಐಪಿಟಿ ಸರಿಯಾಗಿ ತಿಳಿಸಿದೆ. ಕೇವಲ 20 ರಲ್ಲಿ ಮಾತ್ರ ಈಗಲೂ ಹೆಚ್ಚಿನ ಅಪಾಯವಿದೆಯೆಂದು ಪರಿಗಣಿಸಲಾಗಿದೆ.
ಪ್ರಸವಪೂರ್ವ ಸ್ಕ್ರೀನಿಂಗ್‌ನ ನಿಖರತೆಯನ್ನು ಸುಧಾರಿಸುವಲ್ಲಿ ಎನ್ಐಪಿಟಿ ಮತ್ತು ಪ್ರೆಗಾಸ್ಕ್ರೀನ್ ರಿಫ್ಲೆಕ್ಸ್ ಪರೀಕ್ಷೆಗಳ ಗಮನಾರ್ಹ ನಿಖರತೆಯನ್ನು ಈ ಸಂಶೋಧನೆಗಳು ಎತ್ತಿ ತೋರಿಸುತ್ತವೆ. ಈ ಸಮಗ್ರ ವಿಧಾನವು ತಪ್ಪಾಗಿ ಪಾಸಿಟಿವ್ ಎಂದು ಗುರುತಿಸುವುದನ್ನು ಕಡಿಮೆ ಮಾಡುವ ಮೂಲಕ ಮತ್ತು ನಿಜವಾದ ಹೆಚ್ಚಿನ-ಅಪಾಯದ ಗರ್ಭಧಾರಣೆಯನ್ನು ನಿಖರವಾಗಿ ಗುರುತಿಸುವ ಮೂಲಕ, ಹೆಚ್ಚು ಕೇಂದ್ರೀಕೃತ ಮತ್ತು ಪರಿಣಾಮಕಾರಿ ಪ್ರಸವಪೂರ್ವ ಆರೈಕೆಗೆ ಅವಕಾಶ ಮಾಡಿಕೊಡುತ್ತದೆ. ಅಂತಿಮವಾಗಿ, ಇದರಿಂದ ತಾಯಿ ಮತ್ತು ಭ್ರೂಣದ ಆರೋಗ್ಯ ಸುಧಾರಿಸುತ್ತದೆ.
ಮೆಟ್ರೊಪೊಲಿಸ್ ಹೆಲ್ತ್ ಕೇರ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಂದ್ರನ್ ಚೆಮ್ಮೆಂಕೋಟಿಲ್ ಹೇಳುತ್ತಾರೆ: “ಮೆಟ್ರೊಪೊಲಿಸ್‌ನಲ್ಲಿ, ನಮ್ಮ ಆರೋಗ್ಯ ರಕ್ಷಣೆಯ ಕುರಿತಂತೆ ನಮಗಿರುವ ಬದ್ಧತೆ ಕೇವಲ ರೋಗನಿರ್ಣಯಕ್ಕೆ ಸೀಮಿತವಾಗಿಲ್ಲ. ಹಲವಾರು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾದ ನಮ್ಮ ಪ್ರವರ್ತಕ ರಿಫ್ಲೆಕ್ಸ್ ಪರೀಕ್ಷೆ ಸಮಗ್ರ ಮತ್ತು ನಿರ್ಣಾಯಕ ರೋಗನಿರ್ಣಯವನ್ನು ನೀಡುತ್ತದೆ, ಸಮಯವನ್ನು ಉಳಿಸುತ್ತದೆ ಮತ್ತು ರೋಗಿಗಳಿಗೆ ಹೆಚ್ಚುವರಿ ವೆಚ್ಚದ ಹೊರೆಯನ್ನು ಕಡಿಮೆ ಮಾಡುತ್ತದೆ. ನವೀನ ರೋಗನಿರ್ಣಯ ಸಾಧನಗಳು ಮತ್ತು ಸುಧಾರಿತ ಸ್ಕ್ರೀನಿಂಗ್ ತಂತ್ರಜ್ಞಾನಗಳ ಮೂಲಕ ತಾಯಿಯ ಆರೋಗ್ಯ ಪರೀಕ್ಷೆಯನ್ನು ಇನ್ನಷ್ಟು ಆಧುನಿಕೀಕರಿಸಲು ನಾವು ಬದ್ಧರಾಗಿದ್ದೇವೆ. ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಮೆಟ್ರೋಪೊಲಿಸ್ ಒಂದು ಶ್ರೇಷ್ಠತೆಯ ಕೇಂದ್ರವಾಗಬೇಕು, ತಿಳುವಳಿಕೆಯುಳ್ಳ ನಿರ್ಧಾರಗಳಿಗಾಗಿ ಅಗತ್ಯ ಜ್ಞಾನವನ್ನು ಹೊಂದಿರುವ ರೋಗಿಗಳು ಮತ್ತು ಆರೋಗ್ಯ ಪೂರೈಕೆದಾರರನ್ನು ಸಬಲೀಕರಣಗೊಳಿಸಬೇಕು ಮತ್ತು ವ್ಯಾಪಕ ಸಂಶೋಧನಾ ಅಧ್ಯಯನಗಳ ಮೂಲಕ ಜಾಗೃತಿ ಮೂಡಿಸಬೇಕು ಎನ್ನುವುದೇ ನಮ್ಮ ಧ್ಯೇಯ.
ಸಂಶೋಧನೆಗಳ ಕುರಿತು ಪ್ರತಿಕ್ರಿಯಿಸಿದ, ಮೆಟ್ರೊಪೊಲಿಸ್ ಹೆಲ್ತ್‌ಕೇರ್ ಲಿಮಿಟೆಡ್‌ನ ಮುಖ್ಯ ವೈಜ್ಞಾನಿಕ ಮತ್ತು ನಾವೀನ್ಯತೆ ಅಧಿಕಾರಿ ಡಾ. ಕೀರ್ತಿ ಚಡ್ಡಾ ಹೇಳುತ್ತಾರೆ: “ಪ್ರೆಗಾಸ್ಕ್ರೀನ್ ರಿಫ್ಲೆಕ್ಸ್ ಪರೀಕ್ಷೆ ಕಡಿಮೆ ವೆಚ್ಚದ, ವೈಜ್ಞಾನಿಕ ವಿಧಾನವಾಗಿದ್ದು ಸಾಂಪ್ರದಾಯಿಕ ಸ್ಕ್ರೀನಿಂಗ್ ವಿಧಾನಗಳಿಗಿಂತ ಗಮನಾರ್ಹವಾಗಿ ಪರಿಣಾಮಕಾರಿಯಾಗಿದೆ. ಒಳಗೆ ಪ್ರವೇಶಿಸದ ಮತ್ತು ತ್ವರಿತವಾದ ಈ ವಿಧಾನ ಗರ್ಭಪಾತದ ಅಪಾಯವನ್ನು ಕಡಿಮೆ ಮಾಡುತ್ತದೆ; ತಾಯ್ತಂದೆಯರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಆಗಬಹುದಾದ ಮಾನಸಿಕ ಆಘಾತವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಗರ್ಭಧಾರಣೆಯ ಆರಂಭದಲ್ಲಿ ಭ್ರೂಣದ ವರ್ಣತಂತುಗಳ ಅಸಹಜತೆಗಳನ್ನು ಕಂಡುಹಿಡಿಯುವಲ್ಲಿ ಇದು ಹೆಚ್ಚು ನಿಖರವಾಗಿದೆ.
ಒಟ್ಟಾರೆಯಾಗಿ, ಎನ್ಐಪಿಟಿ ಜೊತೆಗಿನ ಪ್ರೆಗಾಸ್ಕ್ರೀನ್ ರಿಫ್ಲೆಕ್ಸ್ ಪರೀಕ್ಷೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ: ರೋಗನಿರ್ಣಯದ ನಿಖರತೆಯನ್ನು ಹೆಚ್ಚಿಸುತ್ತದೆ. ಒಳಗೆ ಪ್ರವೇಶಿಸಬೇಕಿಲ್ಲವಾದ್ದರಿಂದ ಒಳಪ್ರವೇಶಿಸುವ ಕಾರ್ಯವಿಧಾನಗಳಿಗೆ ಸಂಬಂಧಿಸಿದ ಅಪಾಯಗಳು ಇರುವುದಿಲ್ಲ. ಇದು ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗಳ ಪ್ರಸವಪೂರ್ವ ರೋಗನಿರ್ಣಯಕ್ಕೆ ಅವಕಾಶಗಳನ್ನು ಹೆಚ್ಚಿಸುತ್ತದೆ. ಮೆಟ್ರೊಪೊಲಿಸ್ ಹೆಲ್ತ್ ಕೇರ್ ತನ್ನ ಸೇವೆಗಳನ್ನು ವಿಸ್ತರಿಸಲು ಮತ್ತು ತಾಯಿಯ ಆನಾರೋಗ್ಯದ ಹೊರೆಯನ್ನು ಕಡಿಮೆ ಮಾಡಲು ಮತ್ತು ನವೀನ ಆರೋಗ್ಯ ಪರಿಹಾರಗಳನ್ನು ಪಡೆಯುವುದನ್ನು ಸುಲಭವಾಗಿಸಲು ಇತ್ತೀಚಿನ ತಂತ್ರಜ್ಞಾನಗಳನ್ನು ಸಂಘಟಿಸಿ ಬಳಸಲು ಬದ್ಧವಾಗಿದೆ. ರಿಫ್ಲೆಕ್ಸ್ ಟೆಸ್ಟಿಂಗ್ ಮಾದರಿಯ ವಿಕಾಸ, ಆರೋಗ್ಯ ರಕ್ಷಣೆಯಲ್ಲಿನ ಶ್ರೇಷ್ಠತೆ ಮತ್ತು ನಾವೀನ್ಯತೆಗೆ ನಮಗಿರುವ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಇದು ತಾಯಂದಿರು ಮತ್ತು ಶಿಶುಗಳಿಗೆ ಆರೋಗ್ಯಕರ ಭವಿಷ್ಯವನ್ನು ನೀಡುತ್ತದೆ.
ಮುಂಬೈ ಹೋಟೆಲ್ ಉದ್ಯಮಿ ಜಯಾ ಶೆಟ್ಟಿ ಕೊಲೆ ಪ್ರಕರಣ: ‘ಛೋಟಾ ರಾಜನ್’ ದೋಷಿ ಎಂದು ಕೋರ್ಟ್ ತೀರ್ಪು
ಗೂಗಲ್ ನಿಂದ ಮಲೇಷ್ಯಾದಲ್ಲಿ 2 ಬಿಲಿಯನ್ ಡಾಲರ್ ಹೂಡಿಕೆ, 2030ರ ವೇಳೆಗೆ 26,000 ಉದ್ಯೋಗ ಸೃಷ್ಟಿ!