ಬೆಂಗಳೂರು: ರಾಜ್ಯಾಧ್ಯಂತ ಬಹುಮಹಡಿ ಕಟ್ಟಡಗಳಿಗೆ ಕ್ಲಿಯರೆನ್ಸ್ ಪತ್ರ ನೀಡಲು ಉಪ-ನಿರ್ದೇಶಕರು ಅವರುಗಳನ್ನು ಪರಿವೀಕ್ಷಣೆಗೆ ನಿಯೋಜಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾ ಸಮಾದೇಷ್ಟರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಬಹುಮಹಡಿ ಕಟ್ಟಡಗಳಿಗೆ ಕ್ಲಿಯರೆನ್ಸ್ ಪತ್ರ ನೀಡುವ ಸಲುವಾಗಿ ಪರಿವೀಕ್ಷಣೆ ಮಾಡಲು Round-robin ಪದ್ಧತಿಯಲ್ಲಿ ಮುಖ್ಯ ಅಗ್ನಿಶಾಮಕ ಅಧಿಕಾರಿಯವರುಗಳನ್ನು ಹೊರತುಪಡಿಸಿ ಉಪ ನಿರ್ದೇಶಕರು ರವರುಗಳನ್ನು ಮಾತ್ರ ನಿಯೋಜಿಸಲು ಸೂಚಿಸಲಾಗಿತ್ತು. ಸದರಿ ಉಲ್ಲೇಖಿತ ಸುತ್ತೋಲೆಯನ್ವಯ ಉಪ ನಿರ್ದೇಶಕರುಗಳು, ಬಹುಮಹಡಿ ಕಟ್ಟಡಗಳನ್ನು ಪರಿವೀಕ್ಷಿಸುವ ಸಲುವಾಗಿ ಕೇಂದ್ರಸ್ಥಾನವನ್ನು ಬಿಟ್ಟು ತೆರಳುತ್ತಿರುವುದರಿಂದ, ಕೇಂದ್ರ ಕಛೇರಿಯ ದೈನಂದಿನ ಕೆಲಸಗಳಿಗೆ ಅಡಚಣೆಯಾಗುತ್ತಿರುವುದನ್ನು ಗಮನಿಸಲಾಗಿದೆ ಎಂದಿದ್ದಾರೆ.
ಆದುದರಿಂದ, ಆಡಳಿತಾತ್ಮಕ ದೃಷ್ಟಿಯಿಂದ ಈ ಮುಂಚೆ ಚಾಲ್ತಿಯಲ್ಲಿದ್ದಂತೆ ಮಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಕಲಬುರಗಿ ಪ್ರಾಂತ್ಯದಲ್ಲಿ ಬಹುಮಹಡಿ ಕಟ್ಟಡಗಳಿಗೆ ಕ್ಲಿಯರೆನ್ಸ್ ಪತ್ರವನ್ನು ನೀಡುವ ಸಲುವಾಗಿ ಪರಿವೀಕ್ಷಣೆಗೆ ಆಯಾ ಮುಖ್ಯ ಅಗ್ನಿಶಾಮಕ ಅಧಿಕಾರಿಗಳನ್ನು ನಿಯೋಜಿಸುವುದು ಮತ್ತು ಬೆಂಗಳೂರು ನಗರದ ಬಹುಮಹಡಿ ಕಟ್ಟಡಗಳನ್ನು ಮಾತ್ರ Round-robin ಪದ್ಧತಿ ಮೂಲಕ ಮುಖ್ಯ ಅಗ್ನಿಶಾಮಕ ಅಧಿಕಾರಿ, ಬೆಂಗಳೂರು ಪೂರ್ವ, ಪಶ್ಚಿಮ, ಸಮಾದೇಷ್ಟರು ಹಾಗೂ ಉಪ ನಿರ್ದೇಶಕರುಗಳಿಗೆ ಪರಿವೀಕ್ಷಣೆಗೆ ನಿಯೋಜಿಸಲು ಈ ಮೂಲಕ ಸೂಚಿಸಿದ್ದಾರೆ.
19 ವರ್ಷದ ಯುವಕನನ್ನು ಮದುವೆಯಾದ 19 ವರ್ಷದ ಯುವತಿ ವಿರುದ್ಧ ಕೇಸ್ ದಾಖಲು
BREAKING: ಲಂಡನ್, ಬ್ರಸೆಲ್ಸ್, ಇತರ ಯುರೋಪಿಯನ್ ದೇಶಗಳಲ್ಲಿ ಸೈಬರ್ ದಾಳಿ, ವಿಮಾನ ಸೇವೆಯಲ್ಲಿ ವ್ಯತ್ಯಯ