Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘CTET’ ಫೆಬ್ರವರಿ 2026 ಫಲಿತಾಂಶ ಪ್ರಕಟ ; ರಿಸಲ್ಟ್ ನೋಡಲು ನೇರ ಲಿಂಕ್ ಇಲ್ಲಿದೆ.!

30/03/2026 7:54 PM

BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಅಂಕೋಲದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಆಪ್ತನ ಮೇಲೆ ಹತ್ಯೆ ಯತ್ನ

30/03/2026 7:50 PM

ಬೀದರ್‌ನಲ್ಲಿ ಪತ್ರಕರ್ತರ ಸಮ್ಮೇಳ: ಸರ್ವರು ಕೈ ಜೋಡಿಸಲು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ

30/03/2026 7:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಅಂಕೋಲದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಆಪ್ತನ ಮೇಲೆ ಹತ್ಯೆ ಯತ್ನ
KARNATAKA

BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಅಂಕೋಲದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಆಪ್ತನ ಮೇಲೆ ಹತ್ಯೆ ಯತ್ನ

By kannadanewsnow0930/03/2026 7:50 PM

ಕಾರವಾರ: ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಆಪ್ತ ಹಾಗೂ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ನಡೆದ ಭೀಕರ ಹತ್ಯೆ ಯತ್ನ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಮಾರ್ಚ್ 25ರಂದು ಅಂಕೋಲಾದಲ್ಲಿ ಹಾಡಹಗಲೇ ನಡೆದ ಈ ದಾಳಿಯ ಮತ್ತೊಂದು ಸಿಸಿಟಿವಿ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.

ಘಟನೆಯ ವಿವರ: ಕಳೆದ ಬುಧವಾರ ಮಧ್ಯಾಹ್ನ ಗೋಪಾಲಕೃಷ್ಣ ನಾಯಕ್ ಅವರು ಅಂಕೋಲಾದಲ್ಲಿ ಇದ್ದಾಗ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ, ಆರೋಪಿಗಳು ಅತ್ಯಂತ ಕ್ರೂರವಾಗಿ ನಾಯಕ್ ಅವರ ತಲೆಗೆ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಲೆಗೆ ಯತ್ನಿಸಿರುವುದು ಸೆರೆಯಾಗಿದೆ. ಹಗಲು ಹೊತ್ತಿನಲ್ಲೇ ನಡೆದ ಈ ಕೃತ್ಯ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಏಳು ಆರೋಪಿಗಳ ಬಂಧನ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ, ದಾಳಿಯಲ್ಲಿ ಭಾಗಿಯಾಗಿದ್ದ ಗೋವಾ ಮೂಲದ ಏಳಕ್ಕೂ ಹೆಚ್ಚು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಸುಪಾರಿ ದಂಧೆಯ ಶಂಕೆ: ಪ್ರಾಥಮಿಕ ತನಿಖೆಯ ಪ್ರಕಾರ, ಇದೊಂದು ಸುಪಾರಿ (Contract Killing) ನೀಡಿದ ಪ್ರಕರಣ ಎನ್ನಲಾಗುತ್ತಿದೆ. “ಬಂಧಿತರು ಕೇವಲ ದಾಳಿ ಮಾಡಿದವರಾಗಿದ್ದು, ಈ ಹತ್ಯೆ ಯತ್ನಕ್ಕೆ ಸುಪಾರಿ ಕೊಟ್ಟ ಅಸಲಿ ಮಾಸ್ಟರ್ ಮೈಂಡ್ ಯಾರು?” ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸುಪಾರಿ ಕೊಟ್ಟ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ರಾಜಕೀಯ ಸಂಚಲನ: ಗೃಹ ಸಚಿವರ ಆಪ್ತರ ಮೇಲೆಯೇ ಇಂತಹ ದಾಳಿ ನಡೆದಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗಾಯಾಳು ಗೋಪಾಲಕೃಷ್ಣ ನಾಯಕ್ ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಬೀದರ್‌ನಲ್ಲಿ ಪತ್ರಕರ್ತರ ಸಮ್ಮೇಳ: ಸರ್ವರು ಕೈ ಜೋಡಿಸಲು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ

ಸಾಗರದ ‘ಮೀನು ಮಾರುಕಟ್ಟೆ’ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದಿಂದ 129.90 ಲಕ್ಷ ಬಿಡುಗಡೆ

Share. Facebook Twitter LinkedIn WhatsApp Email

Related Posts

ಬೀದರ್‌ನಲ್ಲಿ ಪತ್ರಕರ್ತರ ಸಮ್ಮೇಳ: ಸರ್ವರು ಕೈ ಜೋಡಿಸಲು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ

30/03/2026 7:42 PM2 Mins Read

SHOCKING : ವಾರದಲ್ಲಿ ಇಷ್ಟು ಬಾರಿ ‘ಲೈಂಗಿಕ ಸಂಬಂಧ’ ಇಲ್ಲದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ: ವರದಿ

30/03/2026 7:34 PM2 Mins Read

ಇದು ರಾಯರ ಸನ್ನಿಧಿಯಲ್ಲಿ ನಡೆದ ಸತ್ಯ ಘಟನೆ.! ಇದು ಆ ರಾತ್ರಿ ಮಂತ್ರಾಲಯದಲ್ಲಿ ನಡೆದ ಪವಾಡ.!

30/03/2026 7:04 PM4 Mins Read
Recent News

BREAKING : ‘CTET’ ಫೆಬ್ರವರಿ 2026 ಫಲಿತಾಂಶ ಪ್ರಕಟ ; ರಿಸಲ್ಟ್ ನೋಡಲು ನೇರ ಲಿಂಕ್ ಇಲ್ಲಿದೆ.!

30/03/2026 7:54 PM

BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಅಂಕೋಲದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಆಪ್ತನ ಮೇಲೆ ಹತ್ಯೆ ಯತ್ನ

30/03/2026 7:50 PM

ಬೀದರ್‌ನಲ್ಲಿ ಪತ್ರಕರ್ತರ ಸಮ್ಮೇಳ: ಸರ್ವರು ಕೈ ಜೋಡಿಸಲು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ

30/03/2026 7:42 PM

SHOCKING : ವಾರದಲ್ಲಿ ಇಷ್ಟು ಬಾರಿ ‘ಲೈಂಗಿಕ ಸಂಬಂಧ’ ಇಲ್ಲದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ: ವರದಿ

30/03/2026 7:34 PM
State News
KARNATAKA

BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಅಂಕೋಲದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಆಪ್ತನ ಮೇಲೆ ಹತ್ಯೆ ಯತ್ನ

By kannadanewsnow0930/03/2026 7:50 PM KARNATAKA 1 Min Read

ಕಾರವಾರ: ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಆಪ್ತ ಹಾಗೂ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ…

ಬೀದರ್‌ನಲ್ಲಿ ಪತ್ರಕರ್ತರ ಸಮ್ಮೇಳ: ಸರ್ವರು ಕೈ ಜೋಡಿಸಲು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ

30/03/2026 7:42 PM

SHOCKING : ವಾರದಲ್ಲಿ ಇಷ್ಟು ಬಾರಿ ‘ಲೈಂಗಿಕ ಸಂಬಂಧ’ ಇಲ್ಲದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ: ವರದಿ

30/03/2026 7:34 PM

ಇದು ರಾಯರ ಸನ್ನಿಧಿಯಲ್ಲಿ ನಡೆದ ಸತ್ಯ ಘಟನೆ.! ಇದು ಆ ರಾತ್ರಿ ಮಂತ್ರಾಲಯದಲ್ಲಿ ನಡೆದ ಪವಾಡ.!

30/03/2026 7:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.