ಬಳ್ಳಾರಿ: ರಾಜ್ಯದಲ್ಲೊಂದು ಶಾಕಿಂಗ್ ಘಟನೆ ಎನ್ನುವಂತೆ ಎರಡು ತಿಂಗಳ ಹೆಣ್ಣು ಮಗುವನ್ನು ಹಸುಳೆ ಎಂದು ಕೂಡ ನೋಡದೇ, ಪಾಪಿ ತಾಯಿಯೊಬ್ಬಳು ಕಾಲುವೆಗೆ ಎಸೆದು ಕೊಲೆ ಮಾಡಿರುವಂತ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ ನಲ್ಲಿ ಎರಡು ತಿಂಗಳ ಹಸುಗೂಸನ್ನು ಹೆಣ್ಣು ಮಗು ಎನ್ನುವ ಕಾರಣಕ್ಕೆ ಕಾಲುವೆಗೆ ಎಸೆದು ತಾಯಿ ಕೊಂದಿದ್ದಾರೆ. ಹಸುಗೂಸನ್ನು ಕಾಲುವೆಗೆ ಎಸೆದಂತ ಪಾಪಿ ತಾಯಿ ಪ್ರಿಯಾಂಕಾ ದೇವಿ ಎಂಬುವರು ಆಗಿದ್ದಾರೆ. ಈಕೆಯ ಪತಿ ಸೂರಜ್ ಕುಮಾರ್ ಖಾಸಗಿ ಕಂಪನಿಯೊಂದರಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಪ್ರಿಯಾಂಕಾ ದೇವಿ ಹಾಗೂ ಸೂರಜ್ ಕುಮಾರ್ ದಂಪತಿಗಳು ಬಿಹಾರ ಮೂಲದವರಾಗಿದ್ದಾರೆ. ಈ ದಂಪತಿಗಳು ಬಳ್ಳಾರಿಯ ಸಂಡೂರಿನ ತೋರಣಗಲ್ ನಲ್ಲಿ ವಾಸವಿದ್ದರು. ಈ ದಂಪತಿಗಳಿಗೆ ಈಗಾಗೇ ಇಬ್ಬರು ಹೆಣ್ಣು ಮಕ್ಕಳಿದ್ದರು. ಮೂರನೇ ಮಗುವಾಗಿ ಎರಡು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇದೇ ಕಾರಣಕ್ಕೆ ಪ್ರಿಯಾಂಕಾ ದೇವಿ ಕಾಲುವೆಗೆ ಎಸೆದು ಹಸುಗೂಸು ಕೊಂದಿದ್ದಾರೆ.
ಕಾಲುವೆಗೆ ಎಸೆದು ಬಂದು, ಪೊಲೀಸರ ಮುಂದೆ ಮಗು ಕಾಣುತ್ತಿಲ್ಲ ಎಂಬುದಾಗಿ ಕಣ್ಣೀರಾಡಿದ್ದಾರೆ. ಈ ಸಂಬಂಧ ತೋರಣಗಲ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪಾಪಿ ತಾಯಿಯ ಕೃತ್ಯ ಬಯಲಾಗಿದೆ. ಈ ಸಂಬಂಧ ಪೊಲೀಸರು ಪ್ರಿಯಾಂಕಾ ದೇವಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಸರಳೀಕೃತ ಜಿಎಸ್ಟಿ ಪದ್ಧತಿ ಸ್ವಾಗತಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಂಭ್ರಮಾಚರಣೆ: ಎನ್.ರವಿಕುಮಾರ್
BREAKING: ಹಾಸನದಲ್ಲಿ ಗಣಪತಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದ ಮುಸುಕುಧಾರಿ ಮಹಿಳೆ ಅರೆಸ್ಟ್