ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದ ಸರ್ಕಾರದ 2.5 ವರ್ಷಗಳಲ್ಲಿ ದಾಖಲೆಯ 93,925 ಉದ್ಯೋಗ ಸೃಷ್ಟಿ ಮಾಡಿರುವುದಾಗಿ ಮಾಹಿತಿಯನ್ನು ಸಚಿವ ಎಂ.ಬಿ ಪಾಟೀಲ್ ಹಂಚಿಕೊಂಡಿದ್ದಾರೆ.
ನಮ್ಮ ಸರ್ಕಾರದ ಉದ್ಯಮಸ್ನೇಹಿ ವಾತಾವರಣ ಹಾಗೂ ನೂತನ ಕೈಗಾರಿಕಾ ನೀತಿಗಳು ಚಮತ್ಕಾರ ಮಾಡುತ್ತಿವೆ. ಕಳೆದ 2.5 ವರ್ಷಗಳಲ್ಲಿ ದಾಖಲೆಯ 93,925 ಉದ್ಯೋಗಗಳು ಸೃಷ್ಟಿಯಾಗಿರುವುದು ಇದಕ್ಕೆ ಸ್ಪಷ್ಟ ಸಾಕ್ಷಿ. ಇನ್ನೂ1,886 ಯೋಜನೆಗಳಿಂದ 6,92,545 ಉದ್ಯೋಗಾವಕಾಶಗಳು ನಿರೀಕ್ಷೆಯಲ್ಲಿದ್ದು, ಇದು ಕರ್ನಾಟಕದ ವೇಗವಾದ ಆರ್ಥಿಕ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದಿದ್ದಾರೆ.
ಕಳೆದ ಎರಡೂವರೆ ವರ್ಷಗಳಲ್ಲಿ 67 ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿವೆ. ₹1,91,454 ಕೋಟಿ ವಿದೇಶಿ ಬಂಡವಾಳ ಹೂಡಿಕೆ ಹರಿದು ಬಂದಿದೆ. ನಮ್ಮ ಸರ್ಕಾರ ನಿರ್ಮಾಣ ಮಾಡಿರುವ ಭದ್ರ ಮತ್ತು ಸ್ಥಿರ ಕೈಗಾರಿಕಾ ಪರಿಸರ ಅಪಾರ ಉದ್ಯೋಗ ಸೃಷ್ಟಿಗೆ ಕಾರಣವಾಗಿದ್ದು ವಿಕಾಸದತ್ತ ಕರ್ನಾಟಕ ದೃಢ ಹೆಜ್ಜೆ ಇಡುತ್ತಿದೆ ಎಂದು ಹೇಳಿದ್ದಾರೆ.
2.5 ವರ್ಷಗಳಲ್ಲಿ ದಾಖಲೆಯ 93,925 ಉದ್ಯೋಗ ಸೃಷ್ಟಿ
ನಮ್ಮ ಸರ್ಕಾರದ ಉದ್ಯಮಸ್ನೇಹಿ ವಾತಾವರಣ ಹಾಗೂ ನೂತನ ಕೈಗಾರಿಕಾ ನೀತಿಗಳು ಚಮತ್ಕಾರ ಮಾಡುತ್ತಿವೆ. ಕಳೆದ 2.5 ವರ್ಷಗಳಲ್ಲಿ ದಾಖಲೆಯ 93,925 ಉದ್ಯೋಗಗಳು ಸೃಷ್ಟಿಯಾಗಿರುವುದು ಇದಕ್ಕೆ ಸ್ಪಷ್ಟ ಸಾಕ್ಷಿ. ಇನ್ನೂ1,886 ಯೋಜನೆಗಳಿಂದ 6,92,545 ಉದ್ಯೋಗಾವಕಾಶಗಳು ನಿರೀಕ್ಷೆಯಲ್ಲಿದ್ದು, ಇದು… pic.twitter.com/zqYOAN9Rc1
— M B Patil (@MBPatil) December 13, 2025
‘ಡಿಜಿಟಲ್ ಅರೆಸ್ಟ್’ ವಂಚನೆ: 1 ಕೋಟಿ ರೂ. ಕಳೆದುಕೊಂಡ 82 ವರ್ಷದ ವ್ಯಕ್ತಿ | Digital arrest scam
ಇತಿಹಾಸ ನಿರ್ಮಾಣ! ಐತಿಹಾಸಿಕ ಚೊಚ್ಚಲ ಸ್ಕ್ವಾಷ್ ವಿಶ್ವಕಪ್ ಫೈನಲ್ ತಲುಪಿದ ಭಾರತ








